ಹಿಂದೂ ಧರ್ಮದ ವಿಸ್ತಾರಕ್ಕೆ ವೀರಶೈವವು ಪ್ರವೇಶದ್ವಾರ; ಗ್ರೀಸ್​ನಲ್ಲಿ ಶ್ರೀಶೈಲ ಜಗದ್ಗುರುಗಳ ವ್ಯಾಖ್ಯಾನ

ಅಥೆನ್ಸ್​ನಲ್ಲಿ ನಡೆದ ಧಾರ್ಮಿಕ ಪುನುರುತ್ಥಾನ ಜಾಗತಿಕ ಶೃಂಗ ಸಮ್ಮೇಳನದಲ್ಲಿ ಶ್ರೀಶೈಲ ಜಗದ್ಗುರುಗಳು, ಹರಿಹರಪುರ ಶ್ರೀಗಳು, ತಿರುಚಿ ಶ್ರೀಗಳು ಮತ್ತಿತರ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.
ಅಥೆನ್ಸ್​ನಲ್ಲಿ ನಡೆದ ಧಾರ್ಮಿಕ ಪುನುರುತ್ಥಾನ ಜಾಗತಿಕ ಶೃಂಗ ಸಮ್ಮೇಳನದಲ್ಲಿ ಶ್ರೀಶೈಲ ಜಗದ್ಗುರುಗಳು, ಹರಿಹರಪುರ ಶ್ರೀಗಳು, ತಿರುಚಿ ಶ್ರೀಗಳು ಮತ್ತಿತರ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂ ಧರ್ಮದ ವಿಸ್ತಾರಕ್ಕೆ ವೀರಶೈವವು ಪ್ರವೇಶದ್ವಾರ
  • ಗ್ರೀಸ್​ನಲ್ಲಿ ಶ್ರೀಶೈಲ ಜಗದ್ಗುರುಗಳ ವ್ಯಾಖ್ಯಾನ
  • ಅಥೆನ್ಸ್​ನಲ್ಲಿ ಧಾರ್ಮಿಕ ಪುನುರುತ್ಥಾನ ಜಾಗತಿಕ ಶೃಂಗ ಸಮ್ಮೇಳನ
  • ಆದಿಶಕ್ತಿಯ ಕುರಿತು ಗ್ರೀಸ್ ಸರ್ಕಾರದಿಂದ ಚಿತ್ರ ನಿರ್ಮಾಣ

ಅಥೆನ್ಸ್: ಹಿಂದೂಯೇತರಯಾವುದೇ ಧರ್ಮಿಯರು ಹಿಂದೂ ಧರ್ಮವನ್ನುಪ್ರವೇಶಿಸಬೇಕಾದರೆ ವೀರಶೈವಸಿದ್ಧಾಂತವು ಅದಕ್ಕೆ ಪ್ರಮುಖಪ್ರವೇಶದ್ವಾರವಾಗಿದೆ.ಎಂದು ಶ್ರೀಶೈಲಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಶಿವಾಚಾರ್ಯಭಗವತ್ಪಾದರು ಹೇಳಿದ್ದಾರೆ.

ಗ್ರೀಸ್ದೇಶದ ರಾಜಧಾನಿ ಅಥೆನ್ಸ್ ನಗರದಲ್ಲಿಆಯೋಜಿಸಲಾಗಿದ್ದ ಧಾರ್ಮಿಕಪುನುರುತ್ಥಾನ ಶೃಂಗ ಸಭೆಯಲ್ಲಿ‘ಶೈವ ಒಂದು ಜಾಗತಿಕ ಪ್ರಜ್ಞೆ’ಎಂಬ ವಿಷಯದ ಕುರಿತು ಆಶೀರ್ವಚನನೀಡಿದರು.

ಹಿಂದೂಧರ್ಮವು ಹಲವಾರು ಸಿದ್ಧಾಂತ,ಸಂಪ್ರದಾಯಗಳಸಮೂಹ ಸಂಸ್ಕೃತಿಯಾಗಿದ್ದು,ಇವುಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಜನ್ಮದಿಂದಲೇಆಯಾ ಸಂಪ್ರದಾಯಗಳನ್ನು ಪ್ರವೇಶಿಸಲುಅವಕಾಶವಿದೆ.ಆದರೆ ವೀರಶೈವಸಿದ್ಧಾಂತವು ಲಿಂಗದೀಕ್ಷೆ ಮೊದಲಾದಧರ್ಮ ಸಂಸ್ಕಾರಗಳನ್ನು ನೀಡುವಾಗಯಾವುದೇ ಭೇದವನ್ನು ನೋಡದೆ ಸದ್ಗುಣಮತ್ತು ಸತ್ಕರ್ಮಗಳ ಆಧಾರದ ಮೇಲೆ ಧಾರ್ಮಿಕವಾಗಿ ಸರ್ವರಿಗೂ ಸಾಮಾಜಿಕನ್ಯಾಯವನ್ನು ಕಲ್ಪಿಸಿದೆ.ಜಗತ್ತಿನತತ್ವಜ್ಞಾನದ ತವರು ಎನಿಸಿಕೊಂಡಿರುವಗ್ರೀಸ್ ನೆಲದಲ್ಲಿ,ವಿಶ್ವಗುರುಎನಿಸಿರುವ ಭಾರತೀಯ ತತ್ವಜ್ಞಾನದಕುರಿತು ಚಿಂತನ-ಮಂಥನನಡೆಸುತ್ತಿರುವುದು ಒಂದು ಅಪರೂಪದಸಂದರ್ಭ. ಭೌಗೋಳಿಕವಾಗಿಗ್ರೀಕ್ ಮತ್ತು ಭಾರತ ಬಹಳ ದೂರದದೇಶಗಳಾದರೂ,ತತ್ವಜ್ಞಾನದದೃಷ್ಟಿಯಿಂದ ಬಹಳಷ್ಟು ಹತ್ತಿರದಲ್ಲಿವೆಎಂದು ಜಗದ್ಗುರುಗಳು ವಿವರಿಸಿದರು.

ಸಮ್ಮೇಳನದಲ್ಲಿಹರಿಹರಪುರ ಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ,ಪುತ್ತಿಗೆ ಮಠದಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು, ಬೆಂಗಳೂರುಕೈಲಾಸಾಶ್ರಮದ ಮಹಾಮಂಡಲೇಶ್ವರಶ್ರೀ ಜಯೇಂದಪುರಿ ಸ್ವಾಮೀಜಿ,ಅಕ್ಷರಧಾಮದಶ್ರೀ ಮಹಾಮಹೋಪಾಧ್ಯಾಯ ಭದ್ರೇಶದಾಸಸ್ವಾಮೀಜಿ,ಅಮೃತಸರದ ಸಹಜದೀಪಸಿಂಗ್ ಮಹಾರಾಜ, ಬೌದ್ಧಸಂಪ್ರದಾಯದ ಖೇಮಚಾರ ಭಿಕ್ಕುಜೀ ಮತ್ತಿತರ ಸಂಪ್ರದಾಯದ ಧಾರ್ಮಿಕಮುಖಂಡರು ತಮ್ಮ ವಿಚಾರ ಮಂಡಿಸಿದರು. ದೇವೀ ಮಹಾತ್ಮ್ಯ ಚಿತ್ರ ತಂಡದ ಮನು ಕುಮಾರ, ಶಶಾಂಕ ಆಚಾರ್ಯ, ಅಭಿಷೇಕ ರುದ್ರಮೂರ್ತಿ, ಆಕಾಶ ವಿಶ್ವಾಮಿತ್ರ ಮುಂತಾದವರು ಉಪಸ್ಥಿತರಿದ್ದರು.

ಆದಿಶಕ್ತಿಯಕುರಿತು ಗ್ರೀಸ್ ಸರ್ಕಾರದಿಂದಚಿತ್ರ ನಿರ್ಮಾಣ

ಶಿವನಿಂದಜೀವಿಗಳನ್ನು ಬೇರ್ಪಡಿಸಿದ ಶಕ್ತಿಯೇಕೊನೆಗೆ ಅವರನ್ನು ಶಿವನೊಂದಿಗೆಸೇರಿಸುವುದೇ ಶಕ್ತಿವಿಶಿಷ್ಟಾದ್ವೆತಎನಿಸಿಕೊಂಡಿದ್ದು,ಆದ್ದರಿಂದಅಧ್ಯಾತ್ಮದಲ್ಲಿ ಶಿವನಷ್ಟೇಶಕ್ತಿಗೂ ಪ್ರಾಧಾನ್ಯತೆ ಇದೆ.ಇಂತಹ ಆದಿಶಕ್ತಿಯಮಹಿಮೆಯನ್ನು ವಿಶ್ವದಾದ್ಯಂತಸಾರಲು ಗ್ರೀಸ್ ಸರಕಾರ 100ಕೋಟಿ ರೂ.ವೆಚ್ಚದಲ್ಲಿಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದುಅಭಿನಂದನಾರ್ಹ ಎಂದು ಶ್ರೀಶೈಲಜಗದ್ಗುರುಗಳು ಮೆಚ್ಚುಗೆವ್ಯಕ್ತಪಡಿಸಿದ್ದಾರೆ.

ಆಯೋಜನೆಗೆ ಚಾಲನೆ ನೀಡುವ ನೆಪದಲ್ಲಿಭಾರತದಿಂದ ಎಲ್ಲ ಸಂಪ್ರದಾಯದಸಂತರ ಕರೆಯಿಸಿ ಶೃಂಗ ಸಮಾವೇಶಆಯೋಜಿಸಿದ್ದು ಸುತ್ಯಾರ್ಹಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net