ಈ ನಿಲುವು ತಮಗೆ ಪ್ರಯೋಜನವನ್ನು ನೀಡುತ್ತದೆ ಎಂದು ಎಐಎಡಿಎಂಕೆ ನಂಬಿದೆ. ಮತ್ತೊಂದೆಡೆ, ಅನುಭವ ಇಲ್ಲದ ನಾಯಕರ ತಪ್ಪು ಸಲಹೆಯು ವಿಜಯ್ ಮತ್ತು ಅವರ ಪಕ್ಷವನ್ನು ದೊಡ್ಡ ಗೊಂದಲಕ್ಕೆ ಸಿಲುಕಿಸುತ್ತಿದೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ವಿಜಯ್‌ಗೆ ಸಾಮಾನ್ಯ ಜನರಲ್ಲಿ ಬೆಂಬಲ ಹತ್ತು ಪಟ್ಟು ಹೆಚ್ಚಾಗಿದೆ. ಅದು ಹೇಗೆಂದರೆ, ಟಿವಿಕೆ ಸರ್ಕಾರ ರಚಿಸುವುದನ್ನು ತಡೆಯಲು ರಾಜಕೀಯ ಕುತಂತ್ರಗಳನ್ನು ಕಣ್ಣಿಗೆ ಕಾಣದಂತೆ ನಡೆಯುತ್ತಿರುವುದು ಭವಿಷ್ಯದಲ್ಲಿ ನಟ-ರಾಜಕಾರಣಿಯಾಗಿರುವ ವಿಜಯ್ ಅಧಿಕಾರಕ್ಕೆ ಪ್ಲಸ್ ಆಗುವುದು ಖಚಿತ ಎಂಬ ಸಂಗತಿ ತಮಿಳುನಾಡು ಜನತೆ ಮತ್ತು ಡಿಎಂಕೆ, ಎಐಎಡಿಎಂಕೆಗೂ ಚೆನ್ನಾಗಿ ತಿಳಿದಿದೆ ಎಂಬುದರಲ್ಲಿ ಅನುಮಾನ ಬೇಡ,(ಏಜೆನ್ಸೀಸ್).