ಶೇರಿಂಗ್ ಆಟೋದಲ್ಲಿ, ಬಿಳಿ ಬಣ್ಣದ ಟೀ ಶರ್ಟ್ ಮತ್ತು ಟೋಪಿ ಧರಿಸಿದ್ದ ಯುವಕ. ಆಟೋದ ಹಿಂಬದಿ ಸೀಟಿನ ಬಳಿ ತನ್ನ ಕೈ ಇಟ್ಟು, ಯುವತಿಯ ಕಾಲನ್ನು ಮುಟ್ಟಲು ಯತ್ನಿಸುತ್ತಾನೆ. ಆಕೆ ವಿಡಿಯೋ ಮಾಡುತ್ತಿದ್ದಾಳೆ ಎನ್ನುವುದು ಆತನ ಗಮನಕ್ಕೆ ಬರುತ್ತಲೇ, ತನಗೇನು ತಿಳಿದೇ ಇಲ್ಲ ಎಂದು ಎತ್ತಲೋ ನೋಡುತ್ತಾ ಕುಳಿತು, ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಡಿಯೋವನ್ನು ಅನಯಾ ಸೇರಿದಂತೆ ದಿ ನಳಂದಾ ಇಂಡೆಕ್ಸ್ ಎಂಬ ಎಕ್ಸ್ ಖಾತೆಯಿಂದಲೂ ಹಂಚಿಕೊಳ್ಳಲಾಗಿದೆ.