ವಾರಣಾಸಿಯಲ್ಲಿರುವ ಈ ರೆಸ್ಟೋರೆಂಟ್​ನಲ್ಲಿ ದೆವ್ವಗಳೇ ವೇಟರ್​ಗಳು; ಭೂತ ವೇಷಧಾರಿಗಳ ಕಂಡ ಮಕ್ಕಳ ಕಣ್ಣಲ್ಲಿ ಅಳುವೋ ಅಳುವು..Horror Restaurant

Horror Restaurant
Horror Restaurant
Published on

ಪ್ರಮುಖ ಮುಖ್ಯಾಂಶಗಳು

  • ವಾರಣಾಸಿಯಲ್ಲಿರುವ ಕಂಕಲ್​ ಹಾರರ್ ರೆಸ್ಟೋರೆಂಟ್​​​​ನಲ್ಲಿವೆ ಹಾರರ್ ದೆವ್ವಗಳು
  • ದೆವ್ವ ವೇಷಧಾರಿ ವೇಟರ್​ ಕಂಡ ಮಕ್ಕಳು ಭಯಭೀತರಾಗಿ ಅಳುತ್ತಿರುವ ದೃಶ್ಯ ವೈರಲ್
  • ಮಕ್ಕಳ ಮಾನಸಿಕ ಸ್ಥಿತಿಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದೀರಾ ಎಂದು ನೆಟ್ಟಿಗರಿಂದ ಆಕ್ರೋಶ
ವಾರಣಾಸಿ: ಮನೆಯಲ್ಲಿ ಅಡುಗೆ ತಯಾರಿಸಿಕೊಳ್ಳಲು ಕಷ್ಟವಾದಾಗ, ಅಥವಾ ತೀರ ಅನಿವಾರ್ಯವಿದ್ದಾಗ ಅಥವಾ ಫ್ಯಾಮಿಲಿ ಜಪತೆ ಒಟ್ಟಾಗಿ ಸಮಯ ಕಳೆಯಲು ಹೋಟೆಲ್​ ಅಥವಾ ರೆಸ್ಟೋರೆಂಟ್​​ಗೆ ತೆರಳಿ ಅಲ್ಲಿ ಆಹಾರ ಸೇವನೆ ಮಾಡುತ್ತೇವೆ. ಇಲ್ಲಿ ಖುಷಿ, ಒಂದಷ್ಟು ನಗು, ಮಾತುಕತೆ, ಹಾಡು-ಹರಟೆ ಇರುತ್ತದೆ. ಆದರೆ, ವಾರಣಾಸಿಯಲ್ಲಿರುವ ಒಂದು ರೆಸ್ಟೋರೆಂಟ್​ನಲ್ಲಿ(GhostRestaurant) ಅಡುಗೆ ಬಡಿಸೋದು, ಬಿಲ್ಲಿಂಗ್​ ಮಾಡೋದು ಮನುಷ್ಯರಲ್ಲ ದೆವ್ವಗಳು.....
ಹೆಸರಿನಲ್ಲೇ ಇರುವಂತೆ ಕಂಕಲ್​ ಹಾರರ್ ರೆಸ್ಟೋರೆಂಟ್​​​ ಎಂಬುವುದರಲ್ಲಿ ಫುಡ್​ ಸರ್ವ್​ ಮಾಡುವವರು, ಬಿಲ್ಲಿಂಗ್​ ಮಾಡುವವರು, ಅಡುಗೆ ಮಾಡುವ ಭಟ್ಟರು ಎಲ್ಲರೂ ದೆವ್ವಗಳೇ..ಇವರು ವರ್ತಿಸುವ ರೀತಿಗೆ ಕೆಲವು ಗ್ರಾಹಕರು ಮಜಾ ಮಾಡಿದರೆ, ಇನ್ನೂ ಕೆಲವರು ಜೋರಾಗಿ ಅತ್ತು, ಕರೆಯುತ್ತಾರೆ. ಇನ್ನು ಮಕ್ಕಳು ಮೂತ್ರ ಮಾಡಿಕೊಳ್ಳೋದಂತು ಗ್ಯಾರಂಟಿ.

ವಿಡಿಯೋದಲ್ಲಿ ಏನಿದೆ?

ಕಂಕಲ್​ ಹಾರರ್​ ರೆಸ್ಟೋರೆಂಟ್​ ತನ್ನ ಅಧಿಕೃತ ವಿಡಿಯೋಗಳನ್ನು ಹಂಚಿಕೊಂಡಿದೆ. ಅದರಲ್ಲಿ ದೆವ್ವದ ಹಾಗೆ ತಲೆ ಬುರುಡೆ, ಕಪ್ಪು ಬಟ್ಟೆ, ಒಂದು ಕೋಲು ಹಿಡಿದ ವ್ಯಕ್ತಿಯೊಬ್ಬರು, ಮಕ್ಕಳಿಗೆ ಆಹಾರವನ್ನು ತಂದುಕೊಡುತ್ತಾರೆ. ಇದನ್ನು ಕಂಡ ಮಕ್ಕಳು ದೆವ್ವದ ವೇಷ ತೊಟ್ಟ ಮಾನವನನ್ನು ಕಂಡು ಅಳಲು ಶುರು ಮಾಡಿದರೆ, ಮಕ್ಕಳ ತಾಯಿಗೆ ದೆವ್ವದ ವೇಷಧಾರಿ ಬೆದರಿಸಿ, ಮತ್ತೆ ಕೈ ಕೊಡಲು ಬಂದಾಗ ಹೆದರಿಕೊಂಡಿದ್ದಾರೆ. ಇನ್ನು ವಿಡಿಯೋದಲ್ಲಿರುವ ಮಕ್ಕಳ ತಂದೆ ಆ ದೆವ್ವಕ್ಕೆ ಕೈ ಕೊಟ್ಟು ವಿಷ್ ಮಾಡಿದರೆ, ಮಗ ಮಾತ್ರ ಅಳು ನಿಲ್ಲಿಸುವುದೇ ಇಲ್ಲ.

ರೆಸ್ಟೋರೆಂಟ್​ ಹೇಗಿದೆ?

ರೆಸ್ಟೋರೆಂಟ್​ ಪೂರ ಆವರಣವು ಕೆಂಪು ಬಣ್ಣದಿಂದ ಕೂಡಿದೆ. ಅಲ್ಲಲ್ಲಿ ಮಾನವನ ದೇಹದ ತಲೆ ಬುರುಡೆಗಳು, ಸ್ಕೆಲಿಟನ್​ಗಳು ನೇತಾಡುತ್ತಿವೆ. ಜೊತೆಗೆ ಕೆಟ್ಟದಾಗಿ ದೆವ್ವ ಕೂಗುವಂತೆ ಶಬ್ಧವನ್ನು ಆಗಾಗ ಪ್ರಸಾರ ಮಾಡಲಾಗುತ್ತದೆ. ಕಟ್ಟಡ ಮೇಲ್ಛಾವಣಿಯಲ್ಲಿ ನೇತಾಡುವ ಪ್ಲಾಸ್ಟಿಕ್​ ದಾರವನ್ನು ಹಾಕಲಾಗಿದೆ.

ನೆಟ್ಟಿಗರಿಂದ ಕಿಡಿ

ಹೋಟೇಲ್​ಗೆ ಜನ ಬರೋದೆ ಸಂತೋಷ ಕ್ಷಣ ಕಳೆಯಲು. ಮಕ್ಕಳು ತಮಗಿಷ್ಟವಾದ ಆಹಾರ ಸೇವನೆ ಮಾಡಲು ಬಯಸುತ್ತಾರೆ. ಆದರೆ, ನೀವು ಈ ರೀತಿ ಟಾರ್ಚರ್​ ಕೊಡೋದು ಎಷ್ಟು ಸರಿ. ಹಿರಿಯರಿಗೆ ದೆವ್ವಂತೆ ನಟಿಸಿ ಮನರಂಜನೆ ಕೊಡಬಹುದು. ಆದರೆ, ಮಕ್ಕಳಿಗೆ ಬೇಡ. ಇದು ಅವರ ಮಾನಸಿಕ ಸ್ಥಿತಿ ಸಮಸ್ಯೆಯನ್ನುಂಟು ಮಾಡುತ್ತದೆ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net