PM Modi | ವಂದೇ ಮಾತರಂ ರಾಷ್ಟ್ರೀಯ ಜಾಗೃತಿ ಮಂತ್ರ: ಪ್ರಧಾನಿ ಮೋದಿ

PM Modi | ಪ್ರಧಾನಿ ನರೇಂದ್ರ ಮೋದಿ
PM Modi | ಪ್ರಧಾನಿ ನರೇಂದ್ರ ಮೋದಿ
Published on
ಕೋಲ್ಕತ್ತಾ: ವಂದೇ ಮಾತರಂ ಗೀತೆಯು ರಾಷ್ಟ್ರೀಯ ಜಾಗೃತಿ ಮಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಶನಿವಾರ (ಡಿ.20) ಬಣ್ಣಿಸಿದ್ದಾರೆ. ಅಲ್ಲದೆ, ರಾಷ್ಟ್ರೀಯ ಗೀತೆಯನ್ನು ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಬಂಗಾಳದ ಸಾಂಸ್ಕೃತಿಕ ಪರಂಪರೆಗೆ ಸಂಪರ್ಕಿಸುತ್ತದೆ ಎಂದಿದ್ದಾರೆ.
ಈ ಬಗ್ಗೆ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಮೋದಿ, ವಂದೇ ಮಾತರಂ ಬಂಗಾಳದಲ್ಲಿ ಹುಟ್ಟಿಕೊಂಡಿತು ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು ವಂದೇ ಮಾತರಂ ಮೂಲಕ ರಾಷ್ಟ್ರವನ್ನು ಜಾಗೃತಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಬಂಗಾಳದ ಧಾರ್ಮಿಕ ಮತ್ತು ಸಾಮಾಜಿಕ ಸಂಪ್ರದಾಯಗಳು ಬಗ್ಗೆ ಮಾತನಾಡಿದ ಪ್ರಧಾನಿ, ನಾಡಿಯಾವನ್ನು ಚೈತನ್ಯ ಮಹಾಪ್ರಭುಗಳ ಭೂಮಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಸಮಾಜ ಸುಧಾರಕ ಶ್ರೀ ಹರಿಚಂದ್ ಠಾಕೂರ್ ಮತ್ತು ಬಾರೋ ಮಾ ಅವರಿಗೆ ಮೋದಿ ಗೌರವ ಸಲ್ಲಿಸಿದರು. ಈ ವ್ಯಕ್ತಿಗಳು ಸಮಾಜಕ್ಕೆ ಏಕತೆ ಮತ್ತು ಸುಧಾರಣೆಯ ಮಾರ್ಗವನ್ನು ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಂಗಾಳ ಸರ್ಕಾರದ ಮೇಲೆ ರಾಜಕೀಯ ದಾಳಿ

ಪಶ್ಚಿಮ ಬಂಗಾಳ ಸರ್ಕಾರವನ್ನು ಟೀಕಿಸಿದ ಮೋದಿ, ಕಳಪೆ ಆಡಳಿತ ಮತ್ತು ಭ್ರಷ್ಟಾಚಾರದ ಆರೋಪಿಸಿದ್ದಾರೆ. ಅಲ್ಲದೆ, ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ ಮತ್ತು ರಾಜ್ಯ ಆಡಳಿತವು ಆಯೋಗಗಳ ಮೇಲೆ ಕೇಂದ್ರೀಕರಿಸಿದೆ. ಬಂಗಾಳದ ಜನರು ಬದುಕಲು ಬಯಸುತ್ತೇನೆ. ಅಲ್ಲದೆ, ಜನಕ್ಕೆ ಬಿಜೆಪಿ ಬೇಕು ಎಂಬ ಘೋಷಣೆಯನ್ನು ಬಳಸಿಕೊಂಡು ಬದಲಾವಣೆಗೆ ಕರೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಂದೇ ಮಾತರಂ ಸಾಲು

ರಾಷ್ಟ್ರೀಯ ಗೀತೆಯ 150 ವರ್ಷಗಳನ್ನು ಗುರುತಿಸುವ ವಂದೇ ಮಾತರಂ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷವು ತುಷ್ಟೀಕರಣ ರಾಜಕೀಯದಿಂದಾಗಿ ಹಾಡನ್ನು ದುರ್ಬಲಗೊಳಿಸುತ್ತಿದೆ ಎಂದು ಮೋದಿ ಆರೋಪಿಸಿದ್ದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net