ದೆಹಲಿ-ಪಟನಾ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು: ಗಂಟೆಗೆ 160 KM ವೇಗ, 16 ಬೋಗಿಗಳಲ್ಲಿ 827 ಬರ್ತ್​ ನಿರ್ಮಾಣ | Vande Bharat

Vande Bharat
Vande Bharat
Published on

ಪ್ರಮುಖ ಮುಖ್ಯಾಂಶಗಳು

  • ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಸಂಚಾರ ಆರಂಭ
  • ದೆಹಲಿ-ಪಾಟ್ನಾ ನಡುವೆ ಸಂಚಲಿಸಲಿರುವ ರೈಲು
  • 16 ಭೋಗಿ ಮತ್ತು 827 ಬರ್ತ್​ಗಳನ್ನು ಹೊಂದಿರುವ ರೈಲು
  • ಗಂಟೆಗೆ 160 ಕೀಲೊ ಮೀಟರ್ ವೇಗದಲ್ಲಿ ಚಲನೆ
Vande Bharat : ಕಳೆದೊಂದು ದಶಕದಲ್ಲಿ ಭಾರತೀಯ ರೈಲು (Indian Railways) ಸಾರಿಗೆಯಲ್ಲಿ ಅನೇಕ ಕ್ರಾಂತಿಕಾರಕ ಬದಲಾವಣೆಗಳು ನಡೆದ ಪರಿಣಾಮ ಭಾರತದಲ್ಲಿ ಉತ್ತಮ ಮತ್ತು ಸುರಕ್ಷಿತ ರೈಲು ಪ್ರಯಾಣ ಸಾಧ್ಯವಾಗಿದೆ.
ಕ್ಷಿಪಣಿಯ ವೇಗ ಮತ್ತು ರಾಜಧಾನಿ ಎಕ್ಸ್​ಪ್ರೆಸ್​ ರೀತಿಯ ಸೌಕರ್ಯಗಳನ್ನು ಒಳಗೊಂಡ ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಂದೇ ಭಾರತ್​ ರೈಲು ಯಾವಾಗ ಹಳಿಗಿಳಿಯಿತೋ ಅಂದಿನಿಂದ ರೈಲಿನ ಮೂಲಕ ದೂರ ಪ್ರಯಾಣ ಅತ್ಯಂತ ಸುಲಭ ಮತ್ತು ಸುಗಮವಾಯಿತು. ಮೊದಲು ವಂದೇ ಭಾರತ್ ರೈಲಿನಲ್ಲಿ ಕೇವಲ ಕುಳಿತುಕೊಂಡು ಪ್ರಯಾಣ ಮಾಡಬಹುದಿತ್ತು. ಆದರೆ ಇದೇ ಡಿ. 12 ರಿಂದ ಸ್ಲೀಪರ್ ಕೋಚ್ ಹೊಂದಿರುವ ಮೊದಲ ವಂದೇ ಭಾರತ್ ರೈಲು ದೆಹಲಿ - ಪಟನಾ ಮಾರ್ಗದಲ್ಲಿ ಪ್ರಯಾಣ ಆರಂಭಿಸಲಿದೆ.

ಬೆಂಗಳೂರಿನಲ್ಲಿ ರೈಲಿನ ನಿರ್ಮಾಣ

ವರದಿಗಳ ಪ್ರಕಾರ, ಬೆಂಗಳೂರು ಮೂಲದ ಬಿಇಎಂಎಲ್‌ನಲ್ಲಿ ನಿರ್ಮಿಸಲಾಗುತ್ತಿರುವ ವಂದೇ ಭಾರತ್ ಸ್ಲೀಪರ್‌ನ ಎರಡು ರೈಲುಗಳಲ್ಲಿ ಮೊದಲ ರೈಲಿನ ಕೆಲಸವು ಪೂರ್ಣಗೊಂಡಿದ್ದು, ಅದು ಡಿ.12 ರಂದು ಉತ್ತರ ರೈಲ್ವೆ ವಲಯಕ್ಕೆ ಹೊರಡಲಿದೆ. ನಂತರ ಇದೇ ರೈಲು ದೆಹಲಿ-ಪಾಟ್ನಾ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಒಳಗಾಗಲಿದೆ. ಈ ಹೈಟೆಕ್ ರೈಲು ಒಟ್ಟು 16 ಬೋಗಿಗಳನ್ನು ಹೊಂದಿದೆ. ಅಂತಯೇ 827 ಬರ್ತ್‌ಗಳನ್ನು ಹೊಂದಿದ್ದು, ಅದರಲ್ಲಿ 611 ಮೂರನೇ ಎಸಿ, 188 ಎರಡನೇ ಎಸಿ ಮತ್ತು 24 ಮೊದಲ ಎಸಿ ಭೋಗಿಗಳನ್ನು ಒಳಗೊಂಡಿದೆ.

ಸುಧಾರಿತ ಒಳಾಂಗಣ ಮತ್ತು ಸುರಕ್ಷತೆ

ವಂದೇ ಭಾರತ್ ಸ್ಲೀಪರ್ ರೈಲನ್ನು ಆಧುನಿಕ ಸೌಲಭ್ಯಗಳ ಮೇಲೆ ಬಲವಾದ ಗಮನ ಹರಿಸಿ ವಿನ್ಯಾಸಗೊಳಿಸಲಾಗಿದೆ. ಇದು ಸ್ವಯಂಚಾಲಿತ ಬಾಗಿಲುಗಳು, ಜೈವಿಕ ಶೌಚಾಲಯಗಳು, ಸಿಸಿಟಿವಿ ಕ್ಯಾಮೆರಾಗಳು, ವೈಯಕ್ತಿಕ ಓದುವ ದೀಪಗಳು ಮತ್ತು ಪ್ರೀಮಿಯಂ ಗುಣಮಟ್ಟದ ಆರಾಮದಾಯಕ ಒಳಾಂಗಣಗಳನ್ನು ಒಳಗೊಂಡಿದೆ. ರೈಲನ್ನು ಗಂಟೆಗೆ ಗರಿಷ್ಠ 160 ಕಿಲೋಮೀಟರ್ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಕವಚ್ ವ್ಯವಸ್ಥೆ ಮತ್ತು ಕ್ರ್ಯಾಶ್ ನಿರೋಧಕ ರಚನೆಯಂತಹ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳನ್ನು ಹೊಂದಿದೆ.

ವಂದೇ ಭಾರತ್ ಸ್ಲೀಪರ್ ಮಾರ್ಗ

ವಂದೇ ಭಾರತ್ ಸ್ಲೀಪರ್​ ರೈಲು ನವದೆಹಲಿ ರಾಜೇಂದ್ರ ನಗರ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್‌ನ ಮಾದರಿಯಲ್ಲಿ ಓಡಿಸಲು ಯೋಜಿಸಲಾಗಿದೆ. ಇದು ವಾರದಲ್ಲಿ ಆರು ದಿನಗಳು ಓಡುವ ಸಾಧ್ಯತೆಯಿದೆ. ಪಾಟ್ನಾದಿಂದ ಸಂಜೆ ಹೊರಟ ರೈಲು ಮರುದಿನ ಬೆಳಿಗ್ಗೆ ರಾಜೇಂದ್ರ ನಗರ ಟರ್ಮಿನಲ್​ನ್ನು ತಲುಪಲಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net