ವಂದೇ ಭಾರತ್ ಸ್ಲೀಪರ್ ರೈಲು ದೀರ್ಘದೂರ ರಾತ್ರಿ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, ಸಂಪೂರ್ಣ ವಾತಾನುಕೂಲಿತ ಕೋಚ್‌ಗಳು, ಅಲ್ಟ್ರಾ-ಕಂಫರ್ಟಬಲ್ ಬರ್ತ್‌ಗಳು, ಆಟೋಮ್ಯಾಟಿಕ್ ಬಾಗಿಲುಗಳು, ಆನ್‌ಬೋರ್ಡ್ ವೈಫೈ ಮತ್ತು ವಿಮಾನದಂತಹ ಡಿಸೈನ್ ಹೊಂದಿದೆ. ಬಿಇಎಂಎಲ್ ನಿಂದ ತಯಾರಿಸಲಾದ ಈ ರೈಲಿನ ಪ್ರೋಟೋಟೈಪ್‌ಗಳು 16 ಕೋಚ್‌ಗಳನ್ನು ಹೊಂದಿದ್ದು, ಎಸಿ ಫಸ್ಟ್ ಕ್ಲಾಸ್, ಎಸಿ 2-ಟೈಯರ್ ಮತ್ತು ಎಸಿ 3-ಟೈಯರ್ ಸೌಲಭ್ಯಗಳನ್ನು ಒದಗಿಸುತ್ತವೆ.