ಮತ್ತೊಂದೆಡೆ, ಬೆಳ್ಳಿ ಈಗ ಬಲು ದುಬಾರಿಯಾಗಿದೆ. ಈ ನಿಟ್ಟನಲ್ಲಿ, ಕೆಲ ಭಕ್ತಾಧಿಗಳು, ಅಗ್ಗ ಬೆಲೆಯ ಕ್ಯಾಡ್ಮಿಯಂ ಬಳಕೆಯಿಂದ ಮಾಡಲ್ಪಟ್ಟ ಬೆಳ್ಳಿಯನ್ನು ಕಾಣಿಕೆಯ ರೂಪದಲ್ಲಿ ಕೊಡುತ್ತಿರಬಹುದಾ? ಎಂಬ ಪ್ರಶ್ನೆಗಳು ಕೇಳಿಬಂದಿವೆ. ಆದ್ದರಿಂದ, ಈ ಕಾಣಿಕೆಗಳ ಒಟ್ಟಾರೆ ಮೌಲ್ಯ ತೀವ್ರವಾಗಿ ಕುಸಿದಿದೆ ಎಂದು ವರದಿಯಾಗಿದೆ. ಇದಕ್ಕೆ ಅದ್ಭುತ ಉದಾಹರಣೆ ಎಂದರೆ, ಸುಮಾರು 70 ಕೆಜಿ ಬೆಳ್ಳಿ ವಸ್ತುಗಳ ದೇಣಿಗೆಯಲ್ಲಿ ಕೇವಲ 3 ಕೆಜಿ ಮಾತ್ರ ಅಸಲಿ ಬೆಳ್ಳಿ ಲಭಿಸಿದೆ ಎಂಬುದು ನಿಜಕ್ಕೂ ಬೆಚ್ಚಿಬೀಳುವ ಸಂಗತಿಯೇ,(ಏಜೆನ್ಸೀಸ್).