ಹೌದು, 14 ವರ್ಷದ ಜತಿನ್ ಜೋಶಿ ಎಂಬುವವರು ಎಂದಿನಂತೆ ಮಾರ್ನಿಂಗ್ ರನ್ಗಾಗಿ ಝೌಲ್‌ಖೇತ್ ಕ್ರೀಡಾ ಮೈದಾನಕ್ಕೆ ಶನಿವಾರ 6:30ಜ್ಜೆ ತೆರಳಿದ್ದರು. ಆದರೆ, ದುರಾದೃಷ್ಟವಶಾತ್ ಅವರು ಮೈದಾನದಲ್ಲಿಯೇ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾನೆ. ತಕ್ಷಣ ಆತನ ತಾಯಿ ಪೂನಮ್ ಜೋಶಿ ಮಗನನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ, ಮಾರ್ಗ ಮಧ್ಯೆಯಲ್ಲಿಯೇ ಜತಿನ್ ಜೋಶಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಹೃದಯಾಘಾತವೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.