ಈ ಪ್ರಕರಣಗಳು ಮುಕ್ತಾಯ ಕಾಣುತ್ತಿರುವುದು ಕಲ್ಲಿದ್ದಲು ಗಣಿಗಾರಿಕೆ, ನವೀಕರಿಸಬಹುದಾದ ಇಂಧನ, ಬಂದರು ಹಾಗೂ ವಿಮಾನ ನಿಲ್ದಾಣಗಳ ವಲಯದಲ್ಲಿ ದೈತ್ಯನಾಗಿ ಬೆಳೆದಿರುವ ಅದಾನಿ ಗ್ರೂಪ್‌ಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ವರದಾನವಾಗಲಿದೆ. ಇದರಿಂದಾಗಿ ಅದಾನಿ ಸಮೂಹವು ಮತ್ತೊಮ್ಮೆ ಅಂತರರಾಷ್ಟ್ರೀಯ ಬಂಡವಾಳ ಮಾರುಕಟ್ಟೆಯಿಂದ ಸುಲಭವಾಗಿ ಹಣವನ್ನು ಕ್ರೋಢೀಕರಿಸಲು ಮತ್ತು ತನ್ನ ಉದ್ಯಮ ವಿಸ್ತರಣಾ ಕಾರ್ಯತಂತ್ರವನ್ನು ಮುಂದುವರಿಸಲು ಹಾದಿ ಸುಗಮವಾಗಲಿದೆ.