ಬಿಲಾಸ್‌ಪುರ: ಸರ್ಕಾರಿ ಕಚೇರಿಗಳಲ್ಲಿ ಎಲ್ಲ ಕೆಲಸವು ಆಮೆ ವೇಗದಲ್ಲೇ ಸಾಗುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಯಾವುದೇ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು, ಸರ್ಕಾರಿ ಯೋಜನೆಗೆ ಸಂಬಂಧಿಸಿದ ದಾಖಲೆ ಪಡೆಯಬೇಕು ಎಂದರೆ, ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯವೂ ಅಲೆದಾಡಬೇಕಾಗುತ್ತದೆ. ದಾಖಲೆಗಳು ಕಾಣೆಯಾಗೋದು ಕೂಡ ಇದೆ. ಇಂತಹ ಬೇಕಾಬಿಟ್ಟಿ ಹೇಳಿಕೆ, ನಡವಳಿಕೆಯಿಂದ ಬೇಸತ್ತ ಛತ್ತೀಸ್‌ಗಢದ ಬಿಲಾಸ್‌ಪುರದ(Bilaspur) ಯುವಕನೊಬ್ಬ ಸಿಟ್ಟಿಗೆದ್ದು, ವಿಶೇಷವಾಗಿ ಪ್ರತಿಭಟನೆ ಮಾಡಿದ ಒಂದು ಘಟನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.