ಮಾವನ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿ ವಿಶಾಲ್ ಹಾಗೂ ನಿರುದ್ಯೋಗಿ ಪರಿಚಯಸ್ಥ ರಾಜ್ ಕಿಶೋರ್ (30)ನನ್ನು ಹಾಗೂ ಉತ್ತರ ಪ್ರದೇಶ ಮೂಲದ ಉದ್ಯಮಿ ವಿನೀತ್ ಮಿನೋಚಾ)ರನ್ನು ಶಾಲು ಮಿನೋಚಾರನ್ನು ಬಂಧಿಸಿದ್ದಾರೆ.
ಪೊಲೀಸರು ಹೇಳಿದ್ದೇನು?
ಉದ್ಯಮಿ ವಿನೀತ್ ಅವರು ಮಗ ಮತ್ತು ಸೊಸೆಯ ಖರ್ಚಿನ ಮೇಲೆ ನಿಗಾ ಇಟ್ಟಿದ್ದರು. ಅನಾವಶ್ಯಕತೆ ಖರ್ಚುಗಳ ಮೇಲೆ ನಿರ್ಬಂಧ ಹೇರಿದ್ದರು. ಅವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ತಡರಾತ್ರಿ ಮನೆಗೆ ಬರುವಂತಿರಲಿಲ್ಲ. ಸಣ್ಣ ಖರ್ಚಿಗೂ ಅವರ ಅನುಮತಿ ಕೇಳಬೇಕಿತ್ತು ಎಂದು ಶಾಲು ಹೇಳಿಕೊಂಡಿದ್ದಾರೆ
ವಿನೀತ್ ಸಾವಿಗೂ ಸುಮಾರು 15-20 ದಿನಗಳ ಮೊದಲು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಇದು ಪ್ರೈವೆಸಿಗೆ ಧಕ್ಕೆ ಎಂದು ಹೇಳಿದ್ರು ಕ್ಯಾರೆ ಎಂದಿರಲಿಲ್ಲ. ಇದು ಅವರಿಗೆ ಅಸಮಾಧನವನ್ನುಂಟು ಮಾಡಿದೆ, ಹೀಗಾಗಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಲೆ ನಡೆದ ಸಮಯದಲ್ಲಿ ಪಾರ್ಟಿ ಇತ್ತು
ವಿನೀತ್ ಅವರ ಮಗ ಮತ್ತು ಸೊಸೆ ಕೊಲೆ ನಡೆದ ದಿನ ಪಾರ್ಟಿಗೆ ತೆರಳಿದ್ದರು. ಈ ವೇಳೆ ಅವರ ಫ್ಲಾಟ್ ಬಳಿ ಇಬ್ಬರು ಇಬ್ಬರು ಅನುಮಾನಾಸ್ಪದ ಓಡಾಡುವುದು ಕಂಡುಬಂದಿದೆ. ವಿನೀತ್ ಅವರ ಮಗ ಸುಬ್ರತ್, ಸೊಸೆ ಶಾಲು ಮತ್ತು ಅವರ ಆರು ವರ್ಷದ ಮಗ ಶನಿವಾರ ರಾತ್ರಿ 9:30 ರ ಸುಮಾರಿಗೆ ಪಾರ್ಟಿಗೆಂದು ಮನೆಯಿಂದ ಹೊರಟಿದ್ದರು. ರಾತ್ರಿ 10:30 ರ ಸುಮಾರಿಗೆ ಪಾರ್ಟಿಯ ಸ್ಥಳವನ್ನು ತಲುಪಿದರು.
ಉದ್ಯಮಿ ವಿನೀತ್ ರಾತ್ರಿ 10:58 ಕ್ಕೆ ಮನೆಗೆ ವಾಪಸ್ ಆಗಿದ್ದಾರೆ. ದಾಳಿಕೋರರು ಒಂದು ಗಂಟೆ 15 ನಿಮಿಷಗಳ ಕಾಲ ಫ್ಲಾಟ್ ಒಳಗೆ ಇದ್ದರು. ವಿನೀತ್ ಮಲಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡುವುದು ಅವರ ಪ್ಲ್ಯಾನ್ ಆಗಿತ್ತು. ಆದರೆ ವಿನೀತ್ ನಿದ್ದೆ ಮಾಡದ ಕಾರಣ ಚಾಕುವಿನಿಂದ ಹಲ್ಲೆ ನಡೆಸಿ, ಅವರ ಕುತ್ತಿಗೆ ಮತ್ತು ಎದೆಗೆ ಚೂರಿ ಹಾಕಿ ಕೊಂದಿದ್ದಾರೆ. ಕೊಲೆಯಾದ ನಂತರ ಸೆಪ್ಟೆಂಬರ್ 5 ರ ರಾತ್ರಿ ಆಕೆಗೆ ಕೆಲಸ ಮುಗಿಸಿದ್ದಾಗಿ ಮಾಹಿತಿ ಕೊಟ್ಟಿದ್ದಾರೆ, ನಂತರ ಪತಿ ಮಗನೊಂದಿಗೆ ಬೆಳಗಿನ ಜಾವ 3 ಗಂಟೆಗೆವರೆಗೂ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಏನೂ ತಿಳಿಯದವರಂತೆ ಚೀರಾಡಿ ಅತ್ತಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿದೆ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಯಿಂದ ಮಾಹಿತಿ ಸಿಕ್ಕಿದೆ.
ಒಬ್ಬ ಆರೋಪಿ ಪತ್ತೆ
ಮನೆಗೆ ಎಂಟ್ರಿ ಕೊಟ್ಟ ಇಬ್ಬರಲ್ಲಿ ಒಬ್ಬರನ್ನು ಪೊಲೀಸರು ಪತ್ತೆ ಹಚ್ಚಿದ್ರು ಅವರೇ ವಿನೀತ್ ಅವರ ಜೊತೆ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿ ವಿಶಾಲ್ ಗೌತಮ್. ಅವರು 12-13 ವರ್ಷಗಳಿಂದ ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ವಿಶಾಲ್ ಬಳಿ ಇದ್ದ ಫ್ಲಾಟ್‌ನ ನಕಲಿ ಕೀಯನ್ನು ಬಳಕೆ ಮಾಡಿಕೊಂಡು, ರಾಜ್ ಕಿಶೋರ್ ಜೊತೆ ಮನೆಗೆ ಪ್ರವೇಶಿಸಿದ್ದ ಎನ್ನಲಾಗಿದೆ.
ಹಣದ ಆಮಿಷವೊಡ್ಡಿ ಕೊಲೆ
ವಿನೀತ್ ಅವರ ಸೊಸೆ ಹಣದ ಆಮಿಷವೊಡ್ಡಿ ಕೊಲೆ ಮಾಡಿಸಿದ್ದಾರೆ ಎಂದು ಇಬ್ಬರು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಕಾನ್ಪುರ ಪೊಲೀಸ್ ಡಿಸಿಪಿ ಖಾಸಿಂ ಅಬಿದಿ ಹೇಳಿದ್ರು. ಸದ್ಯ ಶಾಲು ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ಕೊಟ್ಟರು.
309 ಮೆಸೇಜ್ ಹಾಗೂ ಕಾಲ್
ಕೊಲೆಗೆ ಸಂಚು ರೂಪಿಸುವ ಮುನ್ನ ಉದ್ಯಮಿ ಸೊಸೆ ಶಾಲು ಮತ್ತು ವಿಶಾಲ್ ಮೇ1ರಿಂದ ಕೊಲೆಯಾಗುವ ದಿನದವರೆಗೂ 309 ಮೆಸೇಜ್ ಹಾಗೂ ಕಾಲ್ ಮಾಡಿಕೊಂಡಿದ್ದಾರೆ. ಅದರಲ್ಲಿ ಕರೆಗಳು ಇದೆ. ಶಾಲು ಮತ್ತು ವಿಶಾಲ್ ನಡುವೆ ವಿನಿಮಯವಾದ 49 ಮೆಸೇಜ್ಗಳನ್ನು ಡಿಲೀಟ್ ಮಾಡಿದ್ದಾರೆ. ಅದನ್ನು ರಿಟ್ರೀವ್ ಮಾಡಲು ಯತ್ನಿಸಲಾಗುತ್ತಿದೆ ಎನ್ನಲಾಗಿದೆ
6 ಲಕ್ಷ ರೂ.ಗಳ ನೀಡಲಾಗುವುದು ಎಂದು ಶಾಲು ಕೊಟ್ಟ ಒಪ್ಪಂದದ ಕೊಲೆ ಮಾಡಲಾಗಿದೆ, ಕೊಲೆಯಾದ ತಕ್ಷಣ 2 ಲಕ್ಷ ರೂ.ಗಳನ್ನು ಪಾವತಿಸಬೇಕಿತ್ತು, ಉಳಿದ 4 ಲಕ್ಷ ರೂ.ಗಳನ್ನು ಸುಮಾರು 15 ದಿನಗಳ ನಂತರ ಪಾವತಿಸಬೇಕಿತ್ತು ಎಂದು ಪೊಲೀಸರ ತನಿಖೆಯಿಂದ ಪತ್ತೆ ಹಚ್ಚಲಾಗಿದೆ, (ಏಜೆನ್ಸೀಸ್).