UPSC ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ: ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ದೇಶಕ್ಕೆ ಪ್ರಥಮ | UPSC Result

UPSC ನಾಗರಿಕ ಸೇವಾ ಪರೀಕ್ಷೆ 2025ರ ಅಂತಿಮ ಫಲಿತಾಂಶ ಪ್ರಕಟ
UPSC ನಾಗರಿಕ ಸೇವಾ ಪರೀಕ್ಷೆ 2025ರ ಅಂತಿಮ ಫಲಿತಾಂಶ ಪ್ರಕಟ
Published on

ಪ್ರಮುಖ ಮುಖ್ಯಾಂಶಗಳು

  • UPSC ನಾಗರಿಕ ಸೇವಾ ಪರೀಕ್ಷೆ 2025ರ ಅಂತಿಮ ಫಲಿತಾಂಶ ಪ್ರಕಟ
  • ರಾಜಸ್ಥಾನದ ಡಾ. ಅನುಜ್ ಅಗ್ನಿಹೋತ್ರಿ ಮೊದಲ ಸ್ಥಾನ
  • 958 ಅಭ್ಯರ್ಥಿಗಳ ಕನಸು ನನಸು
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC Result) ನಡೆಸುವ ನಾಗರಿಕ ಸೇವಾ ಪರೀಕ್ಷೆ 2025 ರ ಫಲಿತಾಂಶ ಶುಕ್ರವಾರ (ಮಾ.6) ಪ್ರಕಟವಾಗಿದೆ.
ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅಭ್ಯರ್ಥಿ ಗಳಿಸಿದ ಅಂಕಗಳನ್ನು ಸೇರಿಸಿ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದ್ದು, ಕೇಂದ್ರ ಲೋಕಸೇವಾ ಆಯೋಗ (UPSC) ದ ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ.
https://upsc.gov.in/examinations/marks-recommended-candidates-reserve-list
2025 ರಲ್ಲಿ ಕೇಂದ್ರ ಲೋಕಸೇವಾ ಆಯೋಗವು 1,087 ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದು ಒಟ್ಟು 958 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದ್ದು, 258 ಅಭ್ಯರ್ಥಿಗಳನ್ನು ಮೀಸಲು ಪಟ್ಟಿಯಲ್ಲಿ ಇರಿಸಲಾಗಿದೆ. ಹಾಗೆಯೇ ಇಬ್ಬರು ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಫಲಿತಾಂಶವನ್ನು ಹೇಗೆ ನೋಡುವುದು?

ಭಾರತದಲ್ಲಿ ನಡೆಸಲಾಗುವ ಅತ್ಯಂತ ಕಷ್ಟಕರ ಪರೀಕ್ಷೆಯಲ್ಲಿ ಒಂದಾದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಮತ್ತು ಹಲವಾರು ಪರೀಕ್ಷಾ ತರಬೇತಿ ಕೇಂದ್ರಗಳ ಸಾಮಾಜಿಕ ಜಾಲತಾಣಗಳಲ್ಲಿ ಪಿಡಿಎಫ್​ಗಳನ್ನು ಹಂಚಲಾಗುತ್ತಿದೆ.
ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳು ಭಾರತದಾದ್ಯಂತ ಐಎಎಸ್​,ಐಪಿಎಸ್​,ಐಆರ್​ಎಸ್​ ಮೊದಲಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಅನುಜ್ ಅಗ್ನಿಹೋತ್ರಿ ಫಸ್ಟ್​ ರ‍್ಯಾಂಕ್!

ಕೇಂದ್ರ ಲೋಕಸೇವಾ ಆಯೋಗದಿಂದ ನಡೆಸಲಾದ ನಾಗರಿಕ ಸೇವಾ ಪರೀಕ್ಷೆ 2025 ರಲ್ಲಿ ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರು ಈ ಕುರಿತು ತಮ್ಮ ಎಕ್ಸ್​(ಟ್ವಿಟರ್​) ಖಾತೆಯಲ್ಲಿ ಸತತ ಆರು ವರ್ಷಗಳ ಶ್ರಮಕ್ಕೆ ಇಂದು ಫಲ ದೊರೆತಿದೆ. ನಾನು ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ಸ್ಥಾನಗಳಿಸಿದ್ದೆನೆ, ನನಗೆ ಇದು ನಂಬಲಾಗುತ್ತಿಲ್ಲ ಎಂದು ಬರೆದು ಕೊಂಡಿದ್ದಾರೆ.
ಅನುಜ್​ ಅಗ್ನಿಹೋತ್ರಿ ಮೂಲತಃ ರಾಜಸ್ಥಾನದ ಕೋಟಾದವರಾಗಿದ್ದು ಇವರು ವೈಧ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ. ಇವರು ಪ್ರಸ್ತುತ ದೆಹಲಿ, ಅಂಡಮಾನ್​-ನಿಕೋಬಾರ್​ ಪ್ರದೇಶದ ನಾಗರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಆರನೇ ಪ್ರಯತ್ನದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net