ಪತಿ ದೈಹಿಕವಾಗಿ, ಮಾನಸಿಕವಾಗಿ ಚಿತ್ರಹಿಂಸೆ ಕೊಡುತ್ತಾನೆ, ಅತ್ತೆ-ಮಾವ ಕಿರುಕುಳ ನೀಡುತ್ತಿದ್ದಾರೆ ಅಥವಾ ವರದಕ್ಷಿಣೆಗಾಗಿ ಪತಿಯ ಮನೆಯವರು ಪೀಡಿಸುತ್ತಿದ್ದಾರೆ ಎಂಬ ಕಾರಣಗಳಿಗೆ ಅನೇಕ ಯುವತಿಯರು, ಮಹಿಳೆಯರು ವಿಚ್ಛೇದನದ ಮೊರೆ ಹೋಗುತ್ತಾರೆ. ಈ ವಿಷಯದಲ್ಲಿ ಯುವ ಜೋಡಿಗಳು ಮುಂಚೂಣಿಯಲ್ಲಿರುವುದು ಶಾಕಿಂಗ್. ಸಣ್ಣ-ಪುಟ್ಟ ಕಾರಣಗಳಿಗೆ ದೂರ ಉಳಿಯುವ ದಂಪತಿಗಳು, ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಮೊದಲೇ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಇದಕ್ಕೆ ಇಲ್ಲೊಂದು ಪ್ರಕರಣ ಜ್ವಲಂತ ಸಾಕ್ಷಿ.