ಪೊಲೀಸರು ಈಗಾಗಲೇ ಆ ಬೇಕರಿ ಅಂಗಡಿಯಿಂದ ಕೆಲವು ಆಸಿಡ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ಹಿಂದಿನ ಅಸಲಿ ರಹಸ್ಯ ತಿಳಿಯಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇತ್ತ ಜ್ಯುವೆಲ್ಲರಿ ಅಂಗಡಿಯ ಮಾಲೀಕನಾದ ದೇನು ಎಂಬುವವರು ಮಾತನಾಡಿ, ನಮಗೆ ತಿಳಿದಿರುವ ಮಟ್ಟಿಗೆ ಆ ಬಾಟಲಿ ಸಂಪೂರ್ಣವಾಗಿ ಸೀಲ್ ಆಗಿತ್ತು, ಬೇಕರಿಯ ಫ್ರಿಡ್ಜ್‌ನಿಂದ ತಂದ ಬಾಟಲಿಯನ್ನು ನಾವು ಹೇಗೆ ಇತ್ತೋ ಹಾಗೆಯೇ ಗ್ರಾಹಕರಿಗೆ ನೀಡಿದ್ದೆವು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಸೀಲ್ಡ್ ಬಾಟಲಿಯಲ್ಲಿ ಆಸಿಡ್ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ, (ಏಜೆನ್ಸೀಸ್).