ಮೂಲಗಳ ಪ್ರಕಾರ, ಕಾಣೆಯಾಗಿರುವ ಯುವತಿ, ಅದೇ ಗ್ರಾಮದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಹಾವಿನ ಪೊರೆಯನ್ನು ತನ್ನ ಬಟ್ಟೆಯಲ್ಲಿ ಸುತ್ತಿಟ್ಟು, ಹಾಸಿಗೆಯ ಮೇಲೆ ಇರಿಸಿ ಹೋಗಿದ್ದಾಳೆ. ಇದೆಲ್ಲವೂ ಆಕೆಯದ್ದೇ ಪ್ಲ್ಯಾನ್. ಹೀಗೆ ಮಾಡುವುದರಿಂದ ಮನೆಯವರ ದಿಕ್ಕನ್ನು ತಪ್ಪಿಸಲು ಸುಲಭ ಎಂಬುದು ಯುವತಿಯ ಲೆಕ್ಕಾಚಾರ ಎಂದು ಗ್ರಾಮಸ್ಥರು ಮಾತನಾಡಿಕೊಂಡಿದ್ದಾರೆ. ಆದಾಗ್ಯೂ, ಪೊಲೀಸರು ಪ್ರಕರಣ ಭೇದಿಸುವಲ್ಲಿ ನಿರತರಾಗಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).