ರಾಜ್ಯ ಅಧಿಕಾರಿಗಳ ಕೋರಿಕೆಯ ಮೇರೆಗೆ ಕೇಂದ್ರ ವಾಯು ಕಮಾಂಡ್ (ಸಿಎಸಿ) ನಿಂದ IAF Mi-17 V5 ಹೆಲಿಕಾಪ್ಟರ್ ಅನ್ನು ಬಾಲಕರ ರಕ್ಷಣೆಗೆ ನಿಯೋಜಿಸಲಾಯಿತು. ವಿಮಾನವು ಬೆಳಗ್ಗೆ 5:20ರ ಸುಮಾರಿಗೆ ಕಾನ್ಶಿರಾಮ್ ಅವಾಸಿಯ್ ಕಾಲೋನಿಯನ್ನು ತಲುಪಿ, ಬದುಕುಳಿಯುವ ಹಂಬಲದಿಂದ ಸಹಾಯಕ್ಕಾಗಿ ಕಾದು ಕುಳಿತಿದ್ದ ಇಬ್ಬರನ್ನು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಿ, ಗೋರಖ್‌ಪುರಕ್ಕೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಈ ಘಟನೆ ಉಳಿದವರಿಗೆ ಪಾಠವಾಗಲಿ, ಇನ್ಯಾರೂ ಇಂತಹ ತಪ್ಪನ್ನು ಮಾಡದಿರಲಿ ಎಂಬುದೇ ಹೆತ್ತವರ ಕಳಕಳಿ,(ಏಜೆನ್ಸೀಸ್).