

ಉತ್ತರ ಪ್ರದೇಶದ ಶಹಜಹಾನ್‌ಪುರ ಮಹಾನಗರ ಪಾಲಿಕೆಯ ಹಲವು ಕಾರ್ಪೊರೇಟರ್‌ಗಳು ಗಂಗಾಜಲ ಹಿಡಿದು (Gangajal Oath), ಲಂಚದ ಹಣವನ್ನು ತಮ್ಮ ನಡುವೆ ಪ್ರಾಮಾಣಿಕವಾಗಿ ಹಂಚಿಕೊಳ್ಳುವುದಾಗಿ ಪ್ರಮಾಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತೆ ಸೌಮ್ಯಾ ಗುರುರಾಣಿ, ಈ ವಿಡಿಯೋ 2025ರ ನವೆಂಬರ್‌ಗೆ ಸಂಬಂಧಿಸಿದ್ದಾಗಿದೆ. ಆಗ ಬೇರೊಬ್ಬರು ಆಯುಕ್ತರಾಗಿದ್ದರು. ಆದಾಗ್ಯೂ, ನಾವು ಈಗ ತನಿಖೆಗೆ ಆದೇಶಿಸಿದ್ದು, ವರದಿಯ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.