2014ರಲ್ಲಿ ರೇಷ್ಮಾ ಛೆಟ್ರಿ ಎಂಬುವವರು ಆರೋಪಿಯನ್ನು ಮದುವೆ ಮಾಡಿಕೊಂಡರು. ಅದು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಮಧ್ಯೆ ಅನೋನ್ಯತೆ ಹೆಚ್ಚಾಗಿಯೇ ಇತ್ತು. ಇದು ಕೆಲವು ದಿನಗಳ ವರೆಗೆ ಮಾತ್ರ. ಮದ್ಯ ವ್ಯಸನಿಯಾಗಿದ್ದ ಆರೋಪಿ ಎಷ್ಟು ಸೈಕೋಪಾತ್ ಎಂದರೆ, ಮನೆಯ ತುಂಬೆಲ್ಲ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದನಂತೆ, ಆಕೆಯ ಹೋಗುವಿಕೆ, ಬರುವಿಕೆಯನ್ನು ಗಮನಿಸುತ್ತಿದ್ದನಂತೆ. ಸಾಕಿನ್ನು ಇವರ ಸಹವಾಸ ಎಂದು ತವರಿಗೆ ಹೊರಡಲು ನಿಂತರೆ, ಚೆನ್ನಾಗಿ ಹೊಡೆದು ನಿಂದಿಸುತ್ತಿದ್ದ. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಹೇಳಿಕೊಂಡಿದ್ದಾರೆ.