UP man jumps into dam for reel: ಯುವಜನತೆಯಲ್ಲಿ ದಿನದಿಂದ ದಿನಕ್ಕೆ ರೀಲ್ಸ್ ಹುಚ್ಚು ಹೆಚ್ಚಾಗುತ್ತಿದೆ. ರಸ್ತೆ ಮಧ್ಯೆ, ರೈಲು ನಿಲ್ದಾಣ ಯಾವುದೇ ಸ್ಥಳ ಸಿಕ್ಕರೂ ಶಾರ್ಟ್ ವಿಡಿಯೋ ಅಥವಾ ಬ್ಲಾಗ್ ಮಾಡೋದನ್ನು ಮಾತ್ರ ನಿಲ್ಲಿಸೋದಿಲ್ಲ. ಇದರಿಂದಾಗಿ ಕೆಲವರು ಪ್ರಾಣ ಕಳೆದುಕೊಂಡಿದ್ದು ಇದೆ. ಸಾವರ್ಜನಿಕರಿಗೆ ಸಮಸ್ಯೆಯಾದ ಉದಾಹರಣೆಯೂ ಇದೆ. ಅದರಂತೆ, ಉತ್ತರ ಪ್ರದೇಶದ ಝಾನ್ಸಿಯಲ್ಲಿ ಯುವಕನೊಬ್ಬ ರೀಲ್ಸ್ ಮತ್ತು ಲೈಕ್ಸ್ಗಾಗಿ 30 ಅಡಿ ಎತ್ತರದ ಡ್ಯಾಮ್‌ಗೆ ಹಾರಿ ಕಾಲಿನ ಮೂಳೆ ಮುರಿದುಕೊಂಡ ಘಟನೆ ಬೆಳಕಿಗೆ ಬಂದಿದೆ.