ವೈದ್ಯಕೀಯ ಅಧಿಕಾರಿ ವೀರೇಂದ್ರ ಸಿಂಗ್ ಅವರು ತಕ್ಷಣ ಇದನ್ನು ಗಮನಿಸಿ ಡಾ. ಸಿದ್ದಿಕಿ ಅವರಿಂದ ವಿವರಣೆ ಕೋರಿದರು. ಆದರೆ, ಸಿದ್ದಿಕಿ ಸರಿಯಾದ ಸಮಜಾಯಿಷಿ ನೀಡಲು ವಿಫಲವಾದಾಗ, ಮರುದಿನ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಡಾ. ಸಿದ್ದಿಕಿ ಅವರನ್ನು ತುರ್ತು ಕರ್ತವ್ಯದಿಂದ ತೆಗೆದುಹಾಕಲಾಗಿದ್ದು, ಅವರಿಗೆ ನಿಯೋಜಿಸಲಾದ ಕೊಠಡಿಯನ್ನು ಖಾಲಿ ಮಾಡಿಸಲಾಗಿದೆ. ಅಲ್ಲದೆ, ಘಟನೆಯ ಕುರಿತು ವಿವರವಾದ ವರದಿಯನ್ನು ಮುಂದಿನ ಕ್ರಮಕ್ಕಾಗಿ ಹಿರಿಯ ಆರೋಗ್ಯ ಅಧಿಕಾರಿಗಳಿಗೆ ರವಾನಿಸಲಾಗಿದೆ.