ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ : ಪಿರೋಜ್‌ಪುರದಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಿದ ಜಿಹಾದಿಗಳು | Violance

Violance
Violance
Published on
ಬಾಂಗ್ಲಾದೇಶ: ಬಾಂಗ್ಲಾದೇಶದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ನಿಧನವಾದ ನಂತರ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹಿಂಸಾಚಾರ (Violance) ದಿನನಿತ್ಯ ನಡೆಯಲಾರಂಭಿಸಿದೆ. ವರದಿಗಳ ಪ್ರಕಾರ, ಡಿಸೆಂಬರ್ 27 ರಂದು ಪಿರೋಜ್‌ಪುರದ ಡುಮ್ರಿಟೋಲಾ ಗ್ರಾಮದಲ್ಲಿರುವ ಸಹಾ ಅವರ ನಿವಾಸವನ್ನು ಗುರಿಯಾಗಿಟ್ಟುಕೊಂಡು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್,ಪಿರೋಜ್‌ಪುರದ ಡುಮ್ರಿಟೋಲಾ ಗ್ರಾಮದಲ್ಲಿ, ಸಹಾ ಕುಟುಂಬದ ಮನೆಯ ಐದು ಕೊಠಡಿಗಳನ್ನು ಹಿಂದೂ ದ್ವೇಷಿ ಜಿಹಾದಿಗಳು ಸುಟ್ಟುಹಾಕಿದ್ದು,ಬೆಳಗಿನ ಜಾವ ಎಲ್ಲರೂ ಮಲಗಿದ್ದಾಗ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಳೆದ ವಾರ ಆಗ್ನೇಯ ಬಂದರು ನಗರವಾದ ಚಟ್ಟೋಗ್ರಾಮ್ ಬಳಿ ಹಿಂದೂ ಒಡೆತನದ ಮನೆಗೆ ಅಪರಿಚಿತ ದಾಳಿಕೋರರು ಬೆಂಕಿ ಹಚ್ಚಿದ ಘಟನೆ ವರದಿಯಾಗಿತ್ತು. ಎರಡು ಕುಟುಂಬಗಳ ಎಂಟು ಸದಸ್ಯರು ತಗಡು ಹಾಳೆಗಳು ಮತ್ತು ಬಿದಿರಿನ ಬೇಲಿಗಳನ್ನು ಕತ್ತರಿಸಿ ಪರಾರಿಯಾಗುವಲ್ಲಿ ಯಶಸ್ವಿಯಾದರು. ಆದರೆ ಮನೆಯ ವಸ್ತುಗಳು ಮತ್ತು ಸಾಕುಪ್ರಾಣಿಗಳು ಸಾವನ್ನಪ್ಪಿದ್ದು, ದಾಳಿಯ ಸಮಯದಲ್ಲಿ ಐದು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂದೂ ದ್ವೇಷ

ಬಾಂಗ್ಲಾದಲ್ಲಿರುವ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ, ಅಲ್ಪಸಂಖ್ಯಾತರ ವಿರುದ್ಧದ ಹತ್ಯೆಗಳು, ಬೆಂಕಿ ಹಚ್ಚುವಿಕೆ ಮತ್ತು ಭೂಕಬಳಿಕೆ ಸೇರಿದಂತೆ 2,900 ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳು ದಾಖಲಾಗಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮುಂದುವರೆದು ಮಾತನಾಡಿರುವ MEA ವಕ್ತಾರ ಜೈಸ್ವಾಲ್​, ಬಾಂಗ್ಲಾದಲ್ಲಿ ಸಂಭವಿಸುತ್ತಿರುವ ಈ ಘಟನೆಗಳು ಕೇವಲ ಮಾಧ್ಯಮ ಉತ್ಪ್ರೇಕ್ಷೆ ಅಥವಾ ಕಟ್ಟುನಿಟ್ಟಾಗಿ ರಾಜಕೀಯ ಹಿಂಸಾಚಾರ ಎಂಬ ಹೇಳಿಕೆಗಳನ್ನು ಜೈಸ್ವಾಲ್ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಅಲ್ಲದೆ, ಈ ದಾಳಿಗಳನ್ನು ಉಗ್ರರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹಿಂಸಾಚಾರವನ್ನು ಖಂಡಿಸಿದ ಭಾರತ
ಈ ಬಗ್ಗೆ ಮಾತನಾಡಿರುವ MEA ವಕ್ತಾರ ರಣಧೀರ್ ಜೈಸ್ವಾಲ್, ನೆರೆಯ ದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾತ್ಮಕ ದಾಳಿಯ ಮಾದರಿಯನ್ನು ತೋರಿಸಿದೆ. ಅಲ್ಲದೆ, ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಢಾಕಾದಲ್ಲಿರುವ ಮಧ್ಯಂತರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೈಮೆನ್ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಮತ್ತು ರಾಜ್‌ಬರಿಯಲ್ಲಿ ಅಮೃತ್ ಮಂಡಲ್ ಎಂಬ ಇಬ್ಬರು ಹಿಂದೂಗಳನ್ನು ಭೀಕರವಾಗಿ ಥಳಿಸಿ ಹತ್ಯೆ ಮಾಡಿದ ಘಟನೆಗಳ ನಂತರ ಭಾರತ ಈ ಪ್ರತಿಕ್ರಿಯೆ ನೀಡಿದೆ. ಈ ಘಟನೆಗಳು ಅಂತರಾಷ್ಟ್ರೀಯವಾಗಿ ಆಕ್ರೋಶಕ್ಕೆ ಕಾರಣವಾಗಿವೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net