ಇತ್ತೀಚೆಗೆ, ದೆಹಲಿ ಹೈಕೋರ್ಟ್ ಅತ್ಯಾಚಾರ ಪ್ರಕರಣದಲ್ಲಿ ಸೆಂಗರ್‌ಗೆ ಜಾಮೀನು ನೀಡಿತ್ತು. ಆದರೆ, ಸಿಬಿಐ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆ ಆದೇಶಕ್ಕೆ ತಡೆ ನೀಡಿತು. ಕುಲದೀಪ್ ಸಿಂಗ್ ಸೆಂಗರ್ ಪರವಾಗಿ ಹಿರಿಯ ವಕೀಲ ಮನೀಶ್ ವಶಿಷ್ಠ್ ವಾದ ಮಂಡಿಸಿದರೆ, ಸಿಬಿಐ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕಿ ಅನುಭಾ ಭಾರದ್ವಾಜ್ ವಾದ ಮಂಡಿಸಿದರು. ಸಂತ್ರಸ್ತೆಯ ಪರವಾಗಿ ವಕೀಲರಾದ ಮೆಹಮೂದ್ ಪ್ರಾಚಾ, ಕ್ಷಿತಿಜ್ ಸಿಂಗ್ ಮತ್ತು ಕುಮೈಲ್ ಅಬ್ಬಾಸ್ ವಾದ ಮಂಡಿಸಿದರು,(ಏಜನ್ಸೀಸ್).