ಎಲ್​ಪಿಜಿ ಸಿಲಿಂಡರ್​ನ ಕೆಳಭಾಗದಲ್ಲಿ ರಂಧ್ರಗಳು ಏಕಿವೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಉತ್ತರ...Unknown Facts

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ನಾವು ನಿತ್ಯವೂ ಬಳಸುವ ವಸ್ತುಗಳಲ್ಲಿ ಗ್ಯಾಸ್​ ಸಿಲಿಂಡರ್​ ಕೂಡ ಒಂದು
  • ಇಂದು ಸಿಲಿಂಡರ್ ಎಲ್ಲರ ಮನೆಯನ್ನು ಆವರಿಸಿದ್ದು​, ಗ್ಯಾಸ್​ ಇಲ್ಲದ ಮನೆಯೇ ಇಲ್ಲ ಎನ್ನಬಹುದು
  • ಅನೇಕ ಜನರಿಗೆ ಗ್ಯಾಸ್ ಸಿಲಿಂಡರ್‌ನ ಕೆಳಭಾಗದಲ್ಲಿ ರಂಧ್ರಗಳು ಏಕಿವೆ ಅನ್ನೋದಕ್ಕೆ ಉತ್ತರವೇ ಗೊತ್ತಿಲ್ಲ
Unknown Facts : ನಾವು ನಮ್ಮ ದಿನ ನಿತ್ಯದ ಜೀವನದಲ್ಲಿ ಸಾಕಷ್ಟು ವಸ್ತುಗಳನ್ನು ಬಳಸುತ್ತೇವೆ ಮತ್ತು ನೋಡುತ್ತೇವೆ. ಒಂದೊಂದು ವಸ್ತುವಿನಲ್ಲೂ ಒಂದೊಂದು ರೀತಿಯ ವಿಶೇಷತೆ ಇರುತ್ತದೆ. ಅದು ನಮ್ಮ ಕಣ್ಣಿಗೆ ಕಂಡರೂ ನಾವು ಅದನ್ನು ಗಮನಿಸುವುದೇ ಇಲ್ಲ. ನಾವು ನಿತ್ಯವೂ ಬಳಸುವ ವಸ್ತುಗಳಲ್ಲಿ ಗ್ಯಾಸ್​ ಸಿಲಿಂಡರ್​ ಕೂಡ ಒಂದು. ಹೇಳಬೇಕೆಂದರೆ, ಇಂದು ಸಿಲಿಂಡರ್​ ಇಲ್ಲದ ಮನೆಯೇ ಇಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಸಿಲಿಂಡರ್ ಎಲ್ಲರ ಮನೆಯನ್ನು ಆವರಿಸಿದ್ದು, ಹೊಗೆ ಮುಕ್ತ ಅಡುಗೆಗೆ ಸಹಾಯಕವಾಗಿದೆ.
ನೀವು ಸಿಲಿಂಡರ್​ ಅನ್ನು ಪ್ರತಿನಿತ್ಯ ನೋಡುತ್ತಿರುತ್ತೀರಿ. ಅದರ ಕೆಳಭಾಗದಲ್ಲಿ ರಂಧ್ರಗಳು ಇವೆ. ಆ ರಂಧ್ರಗಳು ಏಕಿವೆ ಎಂದು ಪ್ರಶ್ನೆ ಮಾಡಿದರೆ, ಬಹುತೇಕ ಜನರಿಗೆ ಉತ್ತರವೇ ತಿಳಿದಿಲ್ಲ. ಅನೇಕ ಜನರಿಗೆ ಗ್ಯಾಸ್ ಸಿಲಿಂಡರ್‌ನ ಮೇಲ್ಭಾಗದಲ್ಲಿರುವ ನಿಯಂತ್ರಕದ ಬಗ್ಗೆ ಮಾತ್ರ ತಿಳಿದಿರುತ್ತದೆ. ಆದರೆ, ನಾವು ಹೆಚ್ಚಾಗಿ ಸಿಲಿಂಡರ್‌ನ ಕೆಳಭಾಗವನ್ನು ಗಮನಿಸುವುದೇ ಇಲ್ಲ.
ಅಂದಹಾಗೆ, ನಮ್ಮ ಮನೆಗಳಲ್ಲಿ ಅಡುಗೆಗೆ ಬಳಸುವ ಗ್ಯಾಸ್ ಸಿಲಿಂಡರ್‌ನಲ್ಲಿ ಲಿಕ್ವಿಡ್​ ಪೆಟ್ರೋಲಿಯಂ ಅನಿಲ (LPG) ಇರುತ್ತದೆ. ಉಕ್ಕು ಮತ್ತು ಕಬ್ಬಿಣದಿಂದ ತಯಾರಿಸಿದ ದೇಶೀಯ ಸಿಲಿಂಡರ್‌ಗಳು ಸಾಮಾನ್ಯವಾಗಿ ಸುಮಾರು 14.2 ಕೆಜಿ ಎಲ್‌ಪಿಜಿಯನ್ನು ಹೊಂದಿರುತ್ತವೆ. ಸರ್ಕಾರ ನೀಡುವ ಸಬ್ಸಿಡಿ ಅಥವಾ ಮಾರುಕಟ್ಟೆ ಬೆಲೆಗಳನ್ನು ಆಧರಿಸಿ ಸಿಲಿಂಡರ್‌ನ ಬೆಲೆ ಆಗಾಗ ಬದಲಾಗುತ್ತದೆ.
ಎಲ್‌ಪಿಜಿ ಅನಿಲವು ಸುಡುವಂತಹದ್ದಾಗಿರುವುದರಿಂದ ಸಿಲಿಂಡರ್‌ಗಳು ಕೆಂಪು ಬಣ್ಣದಲ್ಲಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳನ್ನು ಕೆಂಪು ಬಣ್ಣದಲ್ಲಿ ತಯಾರಿಸಿ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತದೆ. ಅಲ್ಲದೆ, ದೂರದಿಂದ ಕೆಂಪು ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ತುರ್ತು ಸಂದರ್ಭಗಳಲ್ಲಿ ಅಥವಾ ಗೋದಾಮುಗಳಲ್ಲಿ ಸಿಲಿಂಡರ್‌ಗಳನ್ನು ಗುರುತಿಸಲು ಸುಲಭವಾಗುತ್ತದೆ.

ಸಣ್ಣ ರಂಧ್ರಗಳು ಏಕಿವೆ?

ಇನ್ನು ಸಿಲಿಂಡರ್​ಗಳಲ್ಲಿ ರಂಧ್ರಗಳಿರುವ ಮುಖ್ಯ ಉದ್ದೇಶ ಗಾಳಿಯ ಪ್ರಸರಣವನ್ನು ಸುಧಾರಿಸಲು ಮತ್ತು ತೇವಾಂಶ ಸಂಗ್ರಹವಾಗುವುದನ್ನು ತಡೆಯುವುದಕ್ಕಾಗಿ. ಸಿಲಿಂಡರ್ ಅನ್ನು ನೆಲದ ಮೇಲೆ ಇರಿಸಿದಾಗ, ಟೈಲ್ಸ್ ಅಥವಾ ನೆಲದ ಮೂಲಕ ತೇವಾಂಶ ತಲುಪುವ ಸಾಧ್ಯತೆ ಇರುತ್ತದೆ. ಆ ತೇವಾಂಶ ಹೆಚ್ಚಾಗಿ ಸಿಲಿಂಡರ್‌ನ ಕೆಳಭಾಗದಲ್ಲಿರುತ್ತದೆ. ಇದು ಕಾಲಾನಂತರದಲ್ಲಿ ತುಕ್ಕು ಹಿಡಿಯುವ ಸಾಧ್ಯತೆಯೂ ಇದೆ. ಆದರೆ, ಈ ರಂಧ್ರಗಳು ಸುಲಭವಾದ ಗಾಳಿಯ ಹರಿವಿಗೆ ಅವಕಾಶ ನೀಡುತ್ತವೆ. ಇದು ತೇವಾಂಶವನ್ನು ವೇಗವಾಗಿ ಒಣಗಿಸಲು ಅನುವು ಮಾಡಿಕೊಡುತ್ತದೆ. ಇದಕ್ಕಾಗಿಯೇ ಸಿಲಿಂಡರ್‌ನ ಕೆಳಭಾಗದಲ್ಲಿ ರಂಧ್ರಗಳನ್ನು ಇರಿಸಲಾಗುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net