ಪ್ರಪಂಚದಲ್ಲೇ ಅತಿ ಹೆಚ್ಚು ಪರ್ವತಗಳನ್ನು ಹೊಂದಿರುವ ದೇಶ ಯಾವುದು ಗೊತ್ತಾ? ಈ ಪಟ್ಟಿಯಲ್ಲಿ ಭಾರತವೂ ಇದೆ..! Unknown Facts

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ
  • ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ
  • ಮನುಷ್ಯ ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ
  • ಮಾನವ ತನ್ನ ಜೀವನದ ಉದ್ದಕ್ಕೂ ತಿಳಿದುಕೊಳ್ಳುತ್ತಾ ಸಾಗುತ್ತಾನೆ
Unknown Facts : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ಹೀಗಾಗಿ, ಮಾನವ ತನ್ನ ಜೀವನದ ಉದ್ದಕ್ಕೂ ತಿಳಿದುಕೊಳ್ಳುತ್ತಾ ಸಾಗುತ್ತಾನೆ.
ನಮ್ಮ ಭೂಮಿ ಸಾಗರ ಮತ್ತು ಪರ್ವತಗಳಿಂದ ಸುತ್ತುವರಿದಿದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ನೂರಾರು ದೇಶಗಳಿವೆ. ಒಂದೊಂದು ದೇಶಗಳು ಒಂದೊಂದು ರೀತಿಯ ವಿಶೇಷತೆಗಳನ್ನು ಹೊಂದಿರುತ್ತವೆ. ಹೀಗಿರುವಾಗ ಯಾವ ದೇಶವು ಅತಿ ಹೆಚ್ಚು ಪರ್ವತಗಳನ್ನು ಹೊಂದಿವೆ ಎಂಬುದು ನಿಮಗೆ ಗೊತ್ತಿದೆಯೇ? ಗೊತ್ತಿಲ್ಲ ಅಂದರೆ, ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ನೇಪಾಳ

ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನೇಪಾಳದಲ್ಲಿದೆ. ಅಷ್ಟೇ ಅಲ್ಲ, ನೇಪಾಳದಲ್ಲಿ ಅತಿ ಎತ್ತರದ 100 ಕ್ಕೂ ಹೆಚ್ಚು ಪರ್ವತಗಳಿವೆ. ಹೀಗಾಗಿ ನೇಪಾಳವನ್ನು ವಿಶ್ವದ ಅತಿ ಎತ್ತರದ ಶಿಖರಗಳ ತವರು ಎಂದು ಪರಿಗಣಿಸಲಾಗುತ್ತದೆ.

ಭಾರತ

ಅತಿ ಹೆಚ್ಚು ಪರ್ವತಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 2 ನೇ ಸ್ಥಾನದಲ್ಲಿದೆ. ಭಾರತವು ಹಿಮಾಲಯ, ಪಶ್ಚಿಮ ಘಟ್ಟಗಳು ಮತ್ತು ಹಿಮದಿಂದ ಆವೃತವಾದ ಶಿಖರಗಳು ಸೇರಿದಂತೆ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳಿಂದ ಆಶೀರ್ವದಿಸಲ್ಪಟ್ಟಿದೆ. ಈ ಪರ್ವತಗಳು ಅನೇಕರಿಗೆ ನೈಸರ್ಗಿಕ ಆಶ್ರಯ ಮತ್ತು ಜೀವನೋಪಾಯದ ಮೂಲವಾಗಿದೆ.

ಚೀನಾ

ಈ ಪಟ್ಟಿಯಲ್ಲಿ ಚೀನಾ 3ನೇ ಸ್ಥಾನದಲ್ಲಿದೆ. ಇಲ್ಲಿ ಅತಿ ದೊಡ್ಡ ಪರ್ವತ ಶ್ರೇಣಿಗಳಾದ ಟಿಬೆಟಿಯನ್ ಪ್ರಸ್ಥಭೂಮಿ ಮತ್ತು ಟಿಯೆನ್ ಶಾನ್ ಇವೆ. ಮೌಂಟ್ ಎವರೆಸ್ಟ್ ನೇಪಾಳ ಮತ್ತು ಚೀನಾದ ಗಡಿಯಲ್ಲಿದೆ. ಇದರ ಹೊರತಾಗಿ, ಚೀನಾ ಅನೇಕ ಎತ್ತರದ ಶಿಖರಗಳನ್ನು ಹೊಂದಿರುವ ದೇಶ ಎಂದೂ ಕರೆಯಲ್ಪಡುತ್ತದೆ.

ಪಾಕಿಸ್ತಾನ

ಪಾಕಿಸ್ತಾನವು ಗಮನಾರ್ಹ ಪರ್ವತ ಶ್ರೇಣಿಗಳು ಮತ್ತು ಶಿಖರಗಳನ್ನು ಹೊಂದಿದೆ. ಗಿಲ್ಗಿಟ್-ಬಾಲ್ಟಿಸ್ತಾನ್, ಕೆ2 ನಂತಹ ಪರ್ವತ ಶ್ರೇಣಿಗಳು ಜನಪ್ರಿಯವಾಗಿವೆ. ಕರಕೋರಂ ಪರ್ವತ ಶ್ರೇಣಿಯು ಪರ್ವತಾರೋಹಣ ಉತ್ಸಾಹಿಗಳಿಗೆ ಪ್ರಮುಖ ತಾಣವಾಗಿದೆ.

ಸ್ವಿಡ್ಜರ್​ಲೆಂಡ್​

ಸ್ವಿಡ್ಜರ್​ಲೆಂಡ್​ ಅನ್ನು ಯುರೋಪಿನ ಛಾವಣಿ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೆಂದರೆ ಅಲ್ಲಿ ಅನೇಕ ಪರ್ವತ ಪ್ರದೇಶಗಳಿವೆ. ಸ್ವಿಡ್ಜರ್​ಲೆಂಡ್​ ಸ್ಕೀಯಿಂಗ್ ಮತ್ತು ಪರ್ವಾತಾರೋಹಿಗಳ ಸ್ವರ್ಗವಾಗಿದೆ. ಇಲ್ಲಿ ಹಿಮದಿಂದ ಆವೃತವಾದ ಸುಂದರವಾದ ಪರ್ವತ ಶ್ರೇಣಿಗಳಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net