ಬಿಹಾರ ಸಿಎಂ ನಿತೀಶ್ ಕುಮಾರ್​ಗೆ ಭಾರತ ರತ್ನ ನೀಡುವಂತೆ ಕೇಂದ್ರ ಸಚಿವ ಒತ್ತಾಯ | CM Nitish Kumar

ಸಿಎಂ ನಿತೀಶ್ ಕುಮಾರ್ ಮತ್ತು ಜಿತನ್ ರಾಮ್ ಮಾಂಝಿ
ಸಿಎಂ ನಿತೀಶ್ ಕುಮಾರ್ ಮತ್ತು ಜಿತನ್ ರಾಮ್ ಮಾಂಝಿ
Published on

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್(CM Nitish Kumar)​ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡುವಂತೆ ಶನಿವಾರ(ಜ. 10) ಕೇಂದ್ರ ಸಚಿವ ಹೆಚ್​ಎಎಮ್​ ಪಕ್ಷದ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಒತ್ತಾಯಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಜಿತನ್ ರಾಮ್ ಮಾಂಝಿ, ಭಾರತ ರತ್ನ ನಿತೀಶ್ ಕುಮಾರ್ ಜೀ... ಈ ಮಾತುಗಳನ್ನು ಕೇಳಲು ಎಷ್ಟು ಅದ್ಭುತವಾಗಿದೆ ಅಲ್ಲವೇ? ತಮ್ಮ ನಿರ್ಧಾರಗಳಿಂದ ಎಲ್ಲರನ್ನೂ ಬೆರಗುಗೊಳಿಸುವ ಗೌರವಾನ್ವಿತ ಪ್ರಧಾನಿ ಮೋದಿಯವರು ಬಿಹಾರದ ಗೌರವಾನ್ವಿತ ಸಿಎಂ ನಿತೀಶ್ ಕುಮಾರ್ ಅವರಿಗೆ ಭಾರತ ರತ್ನವನ್ನು ನೀಡುವ ಮೂಲಕ ಮತ್ತೊಮ್ಮೆ ರಾಷ್ಟ್ರವನ್ನು ವಿಸ್ಮಯಗೊಳಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಭಾರತ ರತ್ನ ನಿತೀಶ್ ಕುಮಾರ್.. ಎಂದು ಬರೆದಿದ್ದಾರೆ.

ಮಾಂಝಿಗೂ ಮೊದಲು ಜೆಡಿಯು ನಾಯಕ ಕೆ.ಸಿ.ತ್ಯಾಗಿಯವರು ಕೂಡ ಇದೇ ರೀತಿಯ ಬೇಡಿಕೆಯನ್ನು ಮಂಡಿಸಿದ್ದರು. ಆದರೆ ಜೆಡಿಯು ತ್ಯಾಗಿಯವರ ಹೇಳಿಕೆ ಮತ್ತು ಬೇಡಿಕೆ ಪಕ್ಷಕ್ಕೆ ಸಂಬಂಧಿಸಿದ್ದಲ್ಲ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿತ್ತು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net