ವಾಸ್ತವವಾಗಿ, ಸ್ವಾತಂತ್ರ್ಯದ ಬಳಿಕ ಸುಮಾರು 53 ವರ್ಷಗಳ ಕಾಲ, ಕೇಂದ್ರ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಈ ಸಂಪ್ರದಾಯವು ಬ್ರಿಟಿಷ್ ಕಾಲದ್ದು. ಆ ಸಮಯದಲ್ಲಿ, ಭಾರತದಲ್ಲಿ ಸಂಜೆ 5 ಗಂಟೆಯಾಗಿದ್ದರೆ, ಬ್ರಿಟನ್ನಲ್ಲಿ ಬೆಳಗ್ಗೆ 11 ಗಂಟೆಯಾಗಿರುತ್ತಿತ್ತು. ಬಜೆಟ್ ಸಂಬಂಧಿತ ಮಾಹಿತಿಯನ್ನು ಅಲ್ಲಿನ ಅಧಿಕಾರಿಗಳೊಂದಿಗೆ ಸುಲಭವಾಗಿ ಹಂಚಿಕೊಳ್ಳಲು ಸರ್ಕಾರ ಲಂಡನ್ ಸಮಯಕ್ಕೆ ಅನುಗುಣವಾಗಿ ನಿಗದಿಪಡಿಸುತ್ತಿತ್ತು ಎನ್ನಲಾಗಿದೆ.