ಮೇಘ ಪೂರ್ಣೀಮಾ, ರವಿದಾಸ್ ಜನ್ಮ ದಿನಾಚರಣೆಯ ಶುಭಕೋರುವ ಮೂಲಕ ಬಜೆಟ್ ಭಾಷಣ ಆರಂಭಿಸಿದ ವಿತ್ತ ಸಚಿವೆ, ವಿಕಸಿತ ಭಾರತದತ್ತ ನಾವು ದಾಪುಗಾಲಿಟ್ಟಿದ್ದೇವೆ. ಕಳೆದ 12 ವರ್ಷದಿಂದ ದೇಶದ ಆರ್ಥಿಕತೆ ಸುಧಾರಣೆ ಆಗುತ್ತಿದೆ. ಬಡತನ ನಿರ್ಮೂಲನೆ ಮಾಡುವುದು ನಮ್ಮ ಮುಖ್ಯ ಗುರಿಯಾಗಿದ್ದು, ಜಾಗತಿಕ ಮಾರುಕಟ್ಟೆಯೊಂದಿಗೆ ಪೈಪೋಟಿ ಕೊಟ್ಟಿದ್ದೇವೆ. ಯುವಶಕ್ತಿ ಬಜೆಟ್ ಅನ್ನು ಮಂಡಿಸುತ್ತಿದ್ದೇವೆ ಎಂದರು.