ಈ ಕುರಿತು ನವದೆಹಲಿಯಲ್ಲಿ ಪಿಟಿಐ ಜೊತೆ ಮಾತನಾಡಿರುವ ಅವರು, ಆಯುರ್ವೇದ, ಮೀನುಗಾರರು, ತೆಂಗಿನ ತೋಟಗಳು ಮತ್ತು ಹಡಗು ದುರಸ್ತಿ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ. ಕೇರಳಕ್ಕೆ ಆಯುರ್ವೇದದ ದೀರ್ಘ ಇತಿಹಾಸವಿದೆ ಮತ್ತು ನಾವೆಲ್ಲರೂ ಅಖಿಲ ಭಾರತ ಆಯುರ್ವೇದ ಸಂಸ್ಥೆಗಾಗಿ ಕಾಯುತ್ತಿದ್ದೆವು. ಆದರೆ ಬಜೆಟ್‌ನಲ್ಲಿ ಆ ಉಲ್ಲೇಖವೇ ಇಲ್ಲ ಎಂದು ಕಿಡಿಕಾರಿದ್ದಾರೆ.