ನವದೆಹಲಿ: ಕರ್ನಾಟಕ ಸೇರಿದಂತೆ 9 ರಾಜ್ಯಗಳ 17 ಸ್ಥಳಗಳಲ್ಲಿ ಈ ವರ್ಷದ ಸೆಪ್ಟೆಂಬರ್ ಒಳಗೆ ತಡೆರಹಿತ ಟೋಲ್ ಪ್ಲಾಜಾಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೆಹಲಿಯ ಅರ್ಬನ್ ಎಕ್ಸ್ಟೆನ್ಶನ್ ರಸ್ತೆ-2ರಲ್ಲಿ ದೇಶದ ಎರಡನೇ ತಡೆರಹಿತ ಟೋಲ್ ಪ್ಲಾಜಾಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಅತ್ಯಾಧುನಿಕ ವ್ಯವಸ್ಥೆಯಲ್ಲಿ ವಾಹನಗಳು ಟೋಲ್ ಕಟ್ಟುವುದಕ್ಕಾಗಿ ಪ್ಲಾಜಾಗಳಲ್ಲಿ ನಿಲ್ಲುವ ಅಗತ್ಯವಿಲ್ಲ; ಎಎನ್ಪಿಆರ್ ಮತ್ತು ಫಾಸ್ಟಾ್ಯಗ್ ತಂತ್ರಜ್ಞಾನದ ಮೂಲಕ ಚಲಿಸುತ್ತಿರುವಾಗಲೇ ಹಣ ಕಡಿತವಾಗಲಿದೆ. ಇದರಿಂದ ಇಂಧನ ಹಾಗೂ ಪ್ರಯಾಣದ ಸಮಯ ಉಳಿತಾಯವಾಗಲಿದೆ ಎಂದು ಹೇಳಿದರು.