ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ: ಹಿಮಂತ ಶರ್ಮಾ ಸರ್ಕಾರದಿಂದ ಮಹತ್ವದ ಮಸೂದೆ ಮಂಡನೆ!Himanta Biswa Sarma on UCC
ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಪ್ರಸ್ತಾಪ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಪ್ರಸ್ತಾಪ
ಸಿಎಂ ಹಿಮಂತ ಪರವಾಗಿ ಸಂಸದೀಯ ವ್ಯವಹಾರ ಸಚಿವ ಅತುಲ್ ಬೋರಾ ಪ್ರಸ್ತಾಪನೆ
ಮೇ.27 ರಂದು ನಡೆಯಲಿರುವ ಕಲಾಪ ಹಾಗೂ ಅಂಗೀಕಾರ
ಅಸ್ಸಾಂ: ಎರಡು ವಾರದ ಹಿಂದೆ ಕ್ಯಾಬಿನೆಟ್ ಅನುಮತಿ ಪಡೆದ ನಂತರ ಸೋಮವಾರ (ಮೇ.25) ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪರವಾಗಿ ಸಂಸದೀಯ ವ್ಯವಹಾರ ಸಚಿವ ಅತುಲ್ ಬೋರಾ ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (Himanta Biswa Sarma on UCC) ಮಸೂದೆಯನ್ನು ಪ್ರಸ್ತಾಪ ಮಾಡಿದ್ದಾರೆ.
ಇತ್ತೀಚೆಗೆ ನಡೆದಿದ್ದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದಿಂದ ವಿಜಯಗಳಿಸುವ ಮೂಲಕ ಹಿಮಂತ ಶರ್ಮಾ ಸತತ ಮೂರನೇ ಭಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿದ್ದರು.
ಮೇ. 13 ರಂದು ಬಿಸ್ವಾ ಶರ್ಮಾ ನೇತೃತ್ವದಲ್ಲಿ ನಡೆದಿದ್ದ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವುದಾಗಿ ಅನುಮತಿ ಪಡೆದುಕೊಂಡಿದ್ದರು. ಈಗ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಮೇ.27 ರಂದು ಈ ಕುರಿತು ಚರ್ಚೆ ಹಾಗೂ ಅಂಗೀಕಾರ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.
ಒಂದು ವೇಳೆ ಈ ಮಸೂದೆ ಅಂಗೀಕಾರವಾದರೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆ ಅಸ್ಸಾಂ ಪಡೆಯಲಿದೆ. ಇದಕ್ಕೂ ಮೊದಲು ಗುಜರಾತ್ ಹಾಗೂ ಉತ್ತರಾಖಂಡ್ ರಾಜ್ಯಗಳು ಈ ಯುಸಿಸಿ ಮಸೂದೆಯನ್ನು ಜಾರಿಗೆ ತಂದಿವೆ.
ಮಸೂದೆಯಲ್ಲಿ ಏನಿದೆ?
ಕ್ಯಾಬಿನೆಟ್ ಒಪ್ಪಿಗೆ ದೊರೆತ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಹಿಮಂತ ಶರ್ಮಾ, ನಾವು ಆಶ್ವಾಸನೆ ನೀಡಿದಂತೆ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಸ್ಸಾಂ ಸರ್ಕಾರ ಜಾರಿಗೆ ತರಲಿದೆ. ಅಧಿವೇಶನದ ಕೊನೆಯ ದಿನ ಈ ಮಸೂದೆಯನ್ನು ಸಂಸತ್ತಿನ ಮುಂದೆ ಪ್ರಸ್ತಾಪ ನಡೆಸಲಿದ್ದೆವೆ ಎಂದು ಹೇಳಿದ್ದರು.
ಈ ಮಸೂದೆಯಲ್ಲಿ ಮದುವೆಗೆ ಕನಿಷ್ಠ ವಯಸ್ಸು, ಬಹುಪತ್ನಿತ್ವ ನಿಷೇಧ, ಪೋಷಕರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು, ಲಿವ್-ಇನ್ ಸಂಬಂಧಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎಂದು ಅವರು ತಿಳಿಸಿದ್ದರು.
ಹಾಗೆಯೇ ಪರಿಶಿಷ್ಟ ಪಂಗಡ (ಬೆಟ್ಟದಲ್ಲಿ ವಾಸಿಸುವ) ಮತ್ತು ಪರಿಶಿಷ್ಟ ಪಂಗಡ (ಬಯಲಿನಲ್ಲಿ ವಾಸಿಸುವ) ದ ಜನರನ್ನು ಈ ಮಸೂದೆಯಿಂದ ಹೊರಹಿಟ್ಟಿದ್ದೆವೆ. ಅವರ ಸಾಂಪ್ರದಾಯಿಕ ಧಾರ್ಮಿಕ ಪದ್ಧತಿ ಹಾಗೂ ಆಚರಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ವಿನಾಯಿತಿ ನೀಡಿದ್ದೆವೆ ಎಂದು ಹೇಳಿದ್ದರು, (ಏಜನ್ಸೀಸ್).