ಚೆನ್ನೈ: 'ಡಿಎಂಕೆ ಬೆನ್ನಿಗೆ ಇರಿದ ಕಾಂಗ್ರೆಸ್ ಅವರನ್ನು ಇನ್ನೆಂದು ನಂಬಬಾರದು.10 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ನಮ್ಮ ನೆರವನ್ನು ಪಡೆದುಕೊಂಡಿತ್ತು. ಆದರೆ, ಇಂದು ನಮ್ಮ ಬೆನ್ನಿಗೆ ಚೂರಿ ಹಾಕಿದೆ. ಇದನ್ನು ಮರೆಯೋದು ಬೇಡ, ಭವಿಷ್ಯದಲ್ಲಿ ಯಾವ ಹಂತದಲ್ಲಿಯೂ ಕಾಂಗ್ರೆಸ್ನ್ನು ನಂಬಬಾರದು' ಎಂದು ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹೇಳಿದ್ದರು. ಆ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಮಾಣಿಕಂ ಟ್ಯಾಗೋರ್ ಈಗ ಅತ್ಯಂತ ಕಟುವಾಗಿ ಮತ್ತು ಖಡಕ್ ಆಗಿ ಕೌಂಟರ್ ಕೊಟ್ಟಿದ್ದಾರೆ.