ನಿನ್ನೆ (ಮೇ.12) ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಪತ್ರಿಕಾಗೋಷ್ಟಿ ನಡೆಸಿ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನೂರು ಡಾರಲ್ ದಾಟಿದೆ. ಆದರೆ ನಾವು ದೇಶದಲ್ಲಿ ಇಲ್ಲಿವರೆಗೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸಿಲ್ಲ. ಇದರಿಂದಾಗಿ ನಮಗೆ ದಿನಕ್ಕೆ ಸುಮಾರು 1,000 ಕೋಟಿ ನಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.