Three Sisters Married Same Young Man : ಅಕ್ಕ-ತಂಗಿಯರ ನಡುವಿನ ಪ್ರೀತಿ, ಅನುಬಂಧ ಎಷ್ಟೇ ಗಾಢವಾಗಿದ್ದರೂ ಮದುವೆಯಾದ ಮೇಲೆ ಒಬ್ಬೊಬ್ಬರು ಒಂದೊಂದು ಮನೆ ಸೇರುವುದು ಲೋಕರೂಢಿ, ಆದರೆ ಉತ್ತರ ಪ್ರದೇಶದಲ್ಲಿ ಸಹೋದರಿಯರ ಅತಿಯಾದ ಅನುಬಂಧಕ್ಕೆ ಸಾಕ್ಷಿಯಾಗುವಂತಹ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಕ್ಷಣಕಾಲವೂ ಪರಸ್ಪರ ಅಗಲಿರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮೂವರು ಸೋದರಿಯರು ಒಂದೇ ಯುವಕನನ್ನು ವಿವಾಹವಾಗುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ.