ರಷ್ಯಾ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ; ಓರ್ವ ಭಾರತೀಯ ಕಾರ್ಮಿಕ ಸೇರಿ ನಾಲ್ವರು ಸಾವು | Ukraine drone attack

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಮಾಸ್ಕೋ: ಉಕ್ರೇನ್-ರಷ್ಯಾ ಸಂಘರ್ಷ ಮುಂದುವರೆದಿದ್ದು, ಮಾಸ್ಕೋ ಸುತ್ತಮುತ್ತಲಿನ ಪ್ರದೇಶದ ಮೇಲೆ ಭಾನುವಾರ(ಮೇ 17) ಉಕ್ರೇನ್ ಭೀಕರ ಡ್ರೋನ್ ದಾಳಿ(Ukraine drone attack) ನಡೆಸಿದ್ದು, ಪರಿಣಾಮ ಓರ್ವ ಭಾರತೀಯ ಮೂಲದ ಕಾರ್ಮಿಕ ಸೇರಿ ನಾಲ್ವರು ಮೃತಪಟ್ಟಿದ್ದು, ಒಂದು ಡಜನ್​ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಇಂದು(ಮೇ 17) ಮುಂಜಾನೆ ಮಾಸ್ಕೋ ಪ್ರದೇಶದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬ ಭಾರತೀಯ ಕಾರ್ಮಿಕ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ದಾಳಿ ನಡೆದ ಸ್ಥಳಕ್ಕೆ ರಾಯಭಾರ ಕಚೇರಿಯ ಅಧಿಕಾರಿಗಳು ಭೇಟಿ ನೀಡಿ ಆಸ್ಪತ್ರೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಿದೆ.
ಡ್ರೋನ್ ದಾಳಿಯನ್ನು ಖಚಿತಪಡಿಸಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಅದು ಸಂಪೂರ್ಣವಾಗಿ ಸಮರ್ಥನೀಯವಾದದ್ದು ಎಂದು ಹೇಳಿದ್ದಾರೆ. ಯುದ್ಧದ ಸಮಯದಲ್ಲಿ ರಷ್ಯಾ ಉಕ್ರೇನ್‌ನ ರಾಜಧಾನಿ ಮತ್ತು ಇತರ ನಗರಗಳ ಮೇಲೆ ಪದೇ-ಪದೇ ಇದೇ ರೀತಿಯ ದಾಳಿಗಳನ್ನು ನಡೆಸಿದೆ ಎಂದಿದ್ದಾರೆ.
ಉಕ್ರೇನ್ ನಡೆಸಿದ ದಾಳಿಯಲ್ಲಿ, ಮಾಸ್ಕೋದ ವಾಯುವ್ಯದಲ್ಲಿರುವ ರಷ್ಯಾದ ಖಿಮ್ಕಿಯಲ್ಲಿ ಡ್ರೋನ್ ತನ್ನ ಮನೆಗೆ ಅಪ್ಪಳಿಸಿದ ನಂತರ ಒಬ್ಬ ಮಹಿಳೆ ಮತ್ತು ಪೊಗೊರೆಲ್ಕಿ ಗ್ರಾಮದಲ್ಲಿ ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಆಂಡ್ರೇ ವೊರೊಬಿಯೆವ್ ಹೇಳಿದ್ದಾರೆ.
ಇನ್ನೂ ಪ್ರತೀಕಾರವಾಗಿ ಉಕ್ರೇನ್ ಮೇಲೆ ರಾತ್ರೋರಾತ್ರಿ ರಷ್ಯಾದ ಡ್ರೋನ್ ದಾಳಿಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net