ಹಳೆಯ ಚಾಳಿ ಮುಂದುವರಿಸಿದ ಉದಯನಿಧಿ: ಸನಾತನವನ್ನು ನಿರ್ಮೂಲನೆ ಮಾಡಬೇಕು; ತಮಿಳುನಾಡಲ್ಲಿ ವಂದೇ ಮಾತರಂ ಏಕೆ? ವಿರೋಧ ಪಕ್ಷ ನಾಯಕನ ವಿವಾದ! Udhayanidhi Stalin on Sanatana Dharma

ಜನರನ್ನು ಒಡೆಯುವ ಸನಾತನವನ್ನು ನಿರ್ಮೂಲನೆ ಮಾಡಬೇಕೆಂದ ಉದಯನಿಧಿ
ಜನರನ್ನು ಒಡೆಯುವ ಸನಾತನವನ್ನು ನಿರ್ಮೂಲನೆ ಮಾಡಬೇಕೆಂದ ಉದಯನಿಧಿ
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ಸಿಎಂ ಆಗಿ ದಳಪತಿ ವಿಜಯ್​ ಅಧಿಕಾರ ಸ್ವೀಕಾರ
  • ವಿರೋಧ ಪಕ್ಷ ನಾಯಕನಾಗಿ ಉದಯನಿಧಿ ಸ್ಟಾಲಿನ್​ ಆಯ್ಕೆ
  • ಜನರನ್ನು ಒಡೆಯುವ ಸನಾತನವನ್ನು ನಿರ್ಮೂಲನೆ ಮಾಡಬೇಕೆಂದ ಉದಯನಿಧಿ
ತಮಿಳುನಾಡು: ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಡಿಎಂಕೆ ಅಧಿಕಾರವನ್ನು ಕಳೆದು ಕೊಂಡಿರುವುದು ಎಲ್ಲರಿಗು ತಿಳಿದಿದೆ.
ರಾಜ್ಯದ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ದಳಪತಿ ವಿಜಯ್​ ಆಯ್ಕೆಯಾದರೆ, ವಿರೋಧ ಪಕ್ಷದ ನಾಯಕನಾಗಿ ಡಿಎಂಕೆ ಪಕ್ಷದ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್​ ಪುತ್ರ ಉದಯನಿಧಿ ಸ್ಟಾಲಿನ್ (Udhayanidhi Stalin on Sanatana Dharma) ​ ಆಯ್ಕೆಯಾಗಿದ್ದಾರೆ.

ಸನಾತನದ ವಿರುದ್ಧ ನಾಲಿಗೆ ಹರಿಬಿಟ್ಟ ಉದಯನಿಧಿ!

ಮಂಗಳವಾರ (ಮೇ.12) ತಮಿಳುನಾಡು ಅಸೆಂಬ್ಲಿಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್​, ಸನಾತನ ಇದು ಜನರನ್ನು ಒಡೆದು ಆಳುತ್ತದೆ, ಹೀಗಾಗಿ ಇದನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ. 
ನಿನ್ನೆ ರಾಜ್ಯದ ಮುಖ್ಯಮಂತ್ರಿಯಾಗಿ ವಿಜಯ್​ ಅಧಿಕಾರ ಸ್ವೀಕರಿಸಿದ್ದಾರೆ, ಅವರಿಗೆ ದೇಶದ ವಿವಿಧ ರಾಜ್ಯದ ನಾಯಕರು ಶುಭ ಹಾರೈಸಿದ್ದಾರೆ. ನಾನು ಸಹ ಅವರಿಗೆ ಶುಭ ಕೋರುತ್ತೇನೆ. ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷ ಇಬ್ಬರು ಸೇರಿ ತಮಿಳುನಾಡಿನ ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದು ಹೇಳಿದರು.

ವಂದೇ ಮಾತರಂಗೆ ತಕರಾರು!

ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ವಂದೇ ಮಾತರಂ ಹಾಡನ್ನು ನುಡಿಸಿದ್ದಕ್ಕೆ ವಿರೋಧ ಪಕ್ಷ ವಿರೋಧವನ್ನು ವ್ಯಕ್ತ ಪಡಿಸುತ್ತದೆ ಎಂದ ಉದಯನಿಧಿ, ಪಶ್ಚಿಮ ಬಂಗಾಳದ ಸಿಎಂ ಪ್ರಮಾಣವಚನ ಸ್ವೀಕರಿಸುವಾಗ ಕೇಳಿಬರದ ಹಾಡು ನಮ್ಮ ರಾಜ್ಯದಲ್ಲಿ ಏಕೆ ಕೇಳಿಬರಬೇಕೆಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಇಲ್ಲಿರುವ ಗವರ್ನರ್​ ಕಾರಣ ಎನ್ನುವುದು ಎಲ್ಲರಿಗೂ ತಿಳಿದಿದೆ. ಸರ್ಕಾರ ಈ ತಪ್ಪು ಮುಂದೆ ನಡೆಯದಂತೆ ನೋಡಿ ಕೊಳ್ಳಬೇಕು. ತಮಿಳುನಾಡಿನ ನಾಡಗೀತೆಗೆ ಎರಡನೇ ದರ್ಜೆ ನೀಡಬಾರದು. ನಾನು ಮತ್ತು ಸಿಎಂ ವಿಜಯ್​ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೆವೆ. ನಾವು ನಮ್ಮ ಜ್ಞಾನ ಮತ್ತು ಅನುಭವನನ್ನು ಹಂಚಿಕೊಳ್ಳಲು ಇಷ್ಟಪಡುತ್ತೇವೆ, ಮುಖ್ಯಮಂತ್ರಿಗಳು ನಮ್ಮ ಸಲಹೆಗಳನ್ನು ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೆನೆಂದು ಅವರು ಹೇಳಿದರು,(ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net