ತಲಾ 5-6 ಬಿಯರ್ ಕುಡಿದ ಬಳಿಕ ಉಸಿರುಗಟ್ಟಿ ಸಾವನ್ನಪ್ಪಿದ ಇಬ್ಬರು ಸಾಫ್ಟ್​ವೇರ್ ಇಂಜಿನಿಯರ್​ಗಳು | Death

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ವಿಜಯವಾಡ: ಆಂಧ್ರ ಪ್ರದೇಶದ ಅನ್ನಮ್ಮಯ್ಯ ಜಿಲ್ಲೆಯಲ್ಲಿ ಅತಿಯಾದ ಬೀರ್ ಕುಡಿದಿದ್ದರಿಂದ ಉಸಿರುಗಟ್ಟಿ ಇಬ್ಬರು ಸಾಫ್ಟ್​​ವೇರ್ ಇಂಜಿನಿಯರ್ ಮೃತಪಟ್ಟಿದ್ದಾರೆ ಎಂದು ಬುಧವಾರ(ಜ. 21) ವರದಿಯಾಗಿದೆ.
ಜ. 17ರಂದು ಈ ಘಟನೆ ನಡೆದಿದ್ದು, ಮಣಿ ಕುಮಾರ್(35) ಮತ್ತು ಪುಷ್ಪರಾಜ್(27) ಮೃತ ಸಾಫ್ಟ್​ವೇರ್ ಇಂಜಿನಿಯರ್​ಗಳು. ನಾಲ್ವರು ಸ್ನೇಹಿತರ ಜೊತೆಗೂಡಿ 19 ಬೀರ್​​ಗಳನ್ನು ತಂದು ಹಲವು ಗಂಟೆಗಳ ಕಾಲ ಪಾರ್ಟಿ ಮಾಡಿದ್ದು, ತಲಾ ಒಬ್ಬೊಬ್ಬರು 5-6 ಸೇವಿಸಿದ್ದರು ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ರಾಯಚೋಟಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಕೃಷ್ಣ ಮೋಹನ್, ಅನ್ನಮಯ್ಯ ಜಿಲ್ಲೆಯ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸ್ನೇಹಿತರೊಂದಿಗೆ ಮದ್ಯ ಸೇವಿಸಿದ ಬಳಿಕ ಊಟ ಮಾಡಿದ್ದು ನಂತರ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ನಾಲ್ವರು ಸ್ನೇಹಿತರು 19 ಬಿಯರ್ ಕ್ಯಾನ್‌ಗಳನ್ನು ಖರೀದಿಸಿ ಮಧ್ಯಾಹ್ನ 3.30ರಿಂದ ಸಂಜೆ 7.30ರವರೆಗೆ ಅವುಗಳನ್ನು ಕುಡಿದಿದ್ದಾರೆ. ಆ ವೇಳೆ ಮೃತರಾದ ಮಣಿ ಕುಮಾರ್ ಕುಮಾರ್ ಸುಮಾರು ಆರು ಬಿಯರ್ ಸೇವಿಸಿದರೆ, ಪುಷ್ಪರಾಜ್ ಸುಮಾರು ಐದು ಬಿಯರ್ ಸೇವಿಸಿದ್ದರು ಎಂದಿದ್ದಾರೆ.
ಮನೆಗೆ ಹಿಂತಿರುಗುವಾಗ ಕುಮಾರ್ ಮತ್ತು ಪುಷ್ಪರಾಜ್ ಕುಸಿದು ಬಿದ್ದು, ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ತಕ್ಷಣ ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮೊದಲು ಕುಮಾರ್ ಮೃತಪಟ್ಟಿದ್ದು, ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಪುಷ್ಪರಾಜ್ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮದ್ಯೆ ಪೊಲೀಸರು ಬಿಎನ್‌ಎಸ್‌ಎಸ್‌ನ ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅತಿಯಾದ ಮದ್ಯ ಸೇವನೆ ಮತ್ತು ಆಹಾರ ಸಿಲುಕಿಕೊಂಡಿದ್ದರಿಂದ ಉಸಿರಾಟದ ತೊಂದರೆಯಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಸಿದ ಬಿಯರ್ ಕ್ಯಾನ್‌ಗಳ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಯಾವುದೇ ಕಲ್ಮಶಗಳಿಲ್ಲ ಎಂದು ವರದಿ ಬಂದಿದೆ. ಮೃತರ ರಕ್ತ ಮತ್ತು ಇತರ ಮಾದರಿಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net