ಇಬ್ಬರು ಟ್ರೆಕ್ಕರ್ಸ್​, 2 ಮಿಸ್ಟರಿ... NDRF, SDRF ಹುಡುಕಿದ್ರೂ ಸಿಗ್ತಿಲ್ಲ ಒಂದೇ ದಿನ ಮಿಸ್​ ಆದ ಇಬ್ಬರ ಸುಳಿವು!

ಟ್ರೆಕ್ಕಿಂಗ್​​ನಲ್ಲಿ ಮಿಸ್​ ಆದ ಯುವತಿ
ಟ್ರೆಕ್ಕಿಂಗ್​​ನಲ್ಲಿ ಮಿಸ್​ ಆದ ಯುವತಿ
Published on

ಪ್ರಮುಖ ಮುಖ್ಯಾಂಶಗಳು

  • ಮೇ.29ರಂದು ಒಂದೇ ದಿನ ಇಬ್ಬರೂ ಟ್ರೆಕ್ಕಿಂಗ್​ ವೇಳೆ ಕಣ್ಮರೆ
  • 10ಕ್ಕೂ ಹೆಚ್ಚು ದಿನವಾದರೂ ಇನ್ನೂ ಪತ್ತೆಯಿಲ್ಲ
  • ಬೇರೆ ಬೇರೆ ಪ್ರದೇಶಗಳಲ್ಲಿ ಮಿಸ್​ ಆದವರ ಪತ್ತೆಗೆ ರಕ್ಷಣಾ ಪಡೆ ಹರಸಾಹಸ
ಉತ್ತರಾಖಂಡ: ಮೇ.29ರಂದು ಸ್ನೇಹಿತರ ಜೊತೆಗೆ ಟ್ರೆಕ್ಕಿಂಗ್​ಗೆ ಹೋಗಿದ್ದ ಬಬಿತಾ ಪಾಂಡೆ (23) ಮತ್ತು ವಿಶೇಷ್ ಚೌಹಾಣ್ (28) ಒಂದೇ ದಿನ ಬೇರೆ ಬೇರೆ ಪ್ರದೇಶಗಳಲ್ಲಿ ನಾಪತ್ತೆಯಾಗಿದ್ದು, 10ಕ್ಕೂ ಹೆಚ್ಚು ದಿನ ಕಳೆದರೂ ಇನ್ನೂ ಸಿಗದಿರುವುದು ಸದ್ಯ ಕುಟುಂಬಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಕಾಣೆಯಾದ ಚಾರಣಿಗರನ್ನು ನೈನಿತಾಲ್‌ನ ಬಬಿತಾ ಪಾಂಡೆ ಮತ್ತು ನೋಯ್ಡಾ ಮೂಲದ ವಿಶೇಷ್ ಚೌಹಾಣ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ತಮ್ಮ ಸ್ನೇಹಿತರ ಜೊತೆಗೆ ಹಿಮಾಲಯ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡುವ ವೇಳೆ ಮಿಸ್​ ಆಗಿರುವುದು ಪ್ರಾಥಮಿಕ ವರದಿಯಲ್ಲಿ ಸ್ಪಷ್ಟವಾಗಿದೆ. ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿರುವ ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​, ಐಟಿಬಿಪಿ, ಅರಣ್ಯ ಇಲಾಖೆ, ಪೊಲೀಸ್​ ಅಧಿಕಾರಿಗಳು ಮತ್ತು ಸ್ಥಳೀಯರ ನಿರಂತರ ಹುಡುಕಾಟಕ್ಕೆ ಇನ್ನೂ ಯಾವುದೇ ಉತ್ತರ ಸಿಕ್ಕಿಲ್ಲ.

ಒಂದೇ ಒಂದು ಸುಳಿವಿಲ್ಲ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಟ್ರೆಕ್ಕಿಂಗ್​ಗೆಂದು ಸ್ನೇಹಿತರೊಡೆನೆ ಬಂದಿದ್ದ ಬಬಿತಾ ಪಾಂಡೆ, ಆರಂಭದ ಹಂತದಲ್ಲಿರುವ ಬೇಸ್​ ಕ್ಯಾಂಪ್​ನಿಂದ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಂದ ಆಕೆಗಾಗಿ ಹುಡುಕಾಟ ತೀವ್ರಗೊಂಡಿದ್ದು, ಅಧಿಕಾರಿಗಳು ಈ ಪ್ರದೇಶದಾದ್ಯಂತ ವಿವಿಧ ಸಂಸ್ಥೆಗಳಿಂದ 120ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ರಕ್ಷಣಾ ಪಡೆಗಳು ಮತ್ತು ಹಲವಾರು ಡ್ರೋನ್​ಗಳು ಯುವತಿಯ ಪತ್ತೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಆಕೆಯ ಒಂದೇ ಒಂದು ಸಣ್ಣ ಸುಳಿವು ಸಿಗದಿರುವುದು ಸದ್ಯ ಅನುಮಾನಗಳನ್ನು ಹುಟ್ಟುಹಾಕಿದೆ.

ಇಬ್ಬರು ಟ್ರೆಕ್ಕರ್ಸ್​, 2 ಮಿಸ್ಟರಿ...

ಮತ್ತೊಂದೆಡೆ, ಪಿಂಡಾರಿ ಗ್ಲೇಸಿಯರ್ ಮಾರ್ಗದಲ್ಲಿ ಟ್ರೆಕ್ಕಿಂಗ್​ ಮಾಡುತ್ತಿದ್ದ ಸಾಫ್ಟ್‌ವೇರ್ ಟೆಕ್ಕಿ ಅಭಿಷೇಕ್ ಚೌಹಾಣ್, ಇದಕ್ಕಿದ್ದಂತೆ ಸ್ಥಳದಿಂದ ಕಣ್ಮರೆ ಆಗಿರುವುದು ತಿಳಿದುಬಂದಿದೆ. ಶೋಧಕ್ಕೆ ಬಿದ್ದ ರಕ್ಷಣಾ ಪಡೆಗೆ ಅಭಿಷೇಕ್​ಗೆ ಸಂಬಂಧಿಸಿದ ಕೆಲವು ವಸ್ತುಗಳು ಪಿಂಡಾರ್ ನದಿಯ ಬಳಿ ಸಿಕ್ಕಿದೆ. ಆದರೆ, ಯುವಕ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಇದು ದೊಡ್ಡ ತಲೆನೋವು ತಂದಿಟ್ಟಿದೆ. ಮತ್ತೊಂದು ಆಯಾಮಗಳಲ್ಲಿ ತನಿಖೆ ಮಾಡುತ್ತಿರುವ ಅಧಿಕಾರಿಗಳು, ಮಿಸ್​ ಆದವರ ಸ್ನೇಹಿತರ ಪಾತ್ರ, ಪ್ರಾಣಿಗಳ ದಾಳಿಯಿಂದ ಏನಾದರೂ ತೊಂದರೆ ಆಗಿರುವ ಸಾಧ್ಯತೆಗಳಿರಬಹುದು ಎಂದು ಶಂಕಿಸಿದ್ದಾರೆ.

ಯಾವುದೇ ಅಧಿಕೃತ ಬುಕ್ಕಿಂಗ್​ಗಳು ಆಗಿಲ್ಲ!

ಈ ಮಧ್ಯೆ, ಬಬಿತಾ ಮತ್ತು ಆಕೆಯ ಸ್ನೇಹಿತರು, ಅಧಿಕೃತ ಎಕ್ಸ್‌ಪ್ಲೋರ್ ಉತ್ತರಕಾಶಿ ಪೋರ್ಟಲ್ ಮೂಲಕ ಚಾರಣಕ್ಕೆ ಪ್ರವೇಶ ಪಡೆದಿಲ್ಲ ಎನ್ನಲಾಗಿದೆ. ರೈಥಲ್ ಮೂಲದ ಟ್ರೆಕ್ಕಿಂಗ್ ಏಜೆನ್ಸಿ ಪ್ರೊ ಮೌಂಟೇನ್ ನಕಲಿ ಪರವಾನಗಿಯನ್ನು ಬಳಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಆರೋಪಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net