ಪುಂಡರ ಮುಖಕ್ಕೆ ಮಸಿ ಬಳಿದು, ಬಳಿಕ 'ಬಿಚ್ಛು ಬೂಟಿ' ಅಥವಾ ಸ್ಟಿಂಗಿಂಗ್ ನೆಟಲ್ ಎಂಬ ಗಿಡದಿಂದ ಹೊಡೆದಿದ್ದು, ಚರ್ಮಕ್ಕೆ ಬಿದ್ದ ಏಟಿಗೆ ಬಿದ್ದು ಉರುಳಾಡಿದ ಯುವಕರಿಗೆ ಗ್ರಾಮಸ್ಥರು ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಸಲಿಗೆ, ಈ ಸಸಿಯ ಎಲೆಗಳು ಮತ್ತು ಕಾಂಡದ ಮೇಲಿರುವ ಸೂಕ್ಷ್ಮ ರೋಮಗಳು, ಯಾವುದೇ ಚರ್ಮಕ್ಕೆ ತಾಗಿದರೆ ತೀವ್ರ ಉರಿ, ತುರಿಕೆ ದಿಢೀರ್ ಶುರುವಾಗುತ್ತೆ. ಇದನ್ನೇ ಶಿಕ್ಷೆಗೆ ಸೂಕ್ತ ಎಂದು ತಿಳಿದ ಸ್ಥಳೀಯ ಮಹಿಳೆಯೊಬ್ಬರು, ಈ ಸೊಪ್ಪನ್ನು ಕೈಯಿಂದ ಮುಟ್ಟದೇ ಬಟ್ಟೆಯಿಂದ ಹಿಡಿದು ಕಿರುಕುಳ ನೀಡಿದವರಿಗೆ ಹೊಡೆಯುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.