2000 ಆಕ್ಟೋಬರ್ 19ರಂದು ದೆಹಲಿಯ ಪಶ್ಚಿಮ ವಿಹಾರ್ನಲ್ಲಿರುವ ಐಆರ್ಎಸ್ ಅಧಿಕಾರಿ ಅಶೋಕ್ ಕುಮಾರ್ ಅಗರ್ವಾಲ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ವೇಳೆ ಶೋಧ ನಡೆಸಿ ಸಿಬಿಐ ಅವರನ್ನು ಬಂಧಿಸಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದ ಅಗರ್ವಾಲ್, ಅಧಿಕಾರಿಗಳು ಮುಂಜಾನೆ ತಮ್ಮ ಮನೆಗೆ ಬಲವಂತವಾಗಿ ಪ್ರವೇಶಿಸಿ, ತಮ್ಮ ಮೇಲೆ ಹಲ್ಲೆ ನಡೆಸಿ, ಬಂಧನದ ಸಮಯದಲ್ಲಿ ಕಾನೂನು ವಿಧಾನಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು (ಏಜೆನ್ಸೀಸ್).