ಸಿಸಿಟಿವಿ ಪರಿಶೀಲನೆ ಮತ್ತು ಸ್ಥಳೀಯ ಇನ್ಪುಟ್ ಅನ್ನು ಪರಿಶೀಲಿಸಿದಾಗ ಇಬ್ಬರು ಸ್ಟಿಕ್ಕರ್ ಅಂಟಿಸಿದ್ದು ದೃಢಪಟ್ಟಿದೆ. ಪ್ರವಾಸಿ ವೀಸಾದಲ್ಲಿದ್ದು ರಾಜಕೀಯ ಚಟುವಟಿಕೆಯಲ್ಲಿ ತೋಡಗಿದ್ದು ಸಾಬೀತಾದ ಹಿನ್ನೆಲೆ, ವಲಸೆ ಮತ್ತು ವಿದೇಶಿಯರ ಕಾಯ್ದೆಯಡಿಯಲ್ಲಿ ಇಬ್ಬರ ವಿರುದ್ಧ ಕ್ರಮಕೈಗೊಳ್ಳಲಾಗಿದ್ದು, ಪ್ರವಾಸಿ ವೀಸಾ ಷರತ್ತು ಉಲ್ಲಂಘನೆ ಆರೋಪದ ಮೇಲೆ ಇಬ್ಬರಿಗೂ ದೇಶ ತೊರೆಯುವಂತೆ ನಿರ್ದೇಶಿಸಲಾಗಿದೆ.