ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ಕೌಶಿಕ್ ರಾಯ್ ಅವರ ಹೆಸರೇ ಇತ್ತು. ಆದರೆ, ಈ ಘೋಷಣೆಯ ಬೆನ್ನಲ್ಲೇ ಸ್ಥಳೀಯ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಆಂತರಿಕ ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ಮುಂದಾದ ಬಿಜೆಪಿ ಹೈಕಮಾಂಡ್, ಕೊನೆಕ್ಷಣದಲ್ಲಿ ಕೌಶಿಕ್ ರಾಯ್ ಬದಲಿಗೆ ದಲಿಮ್ ರಾಯ್ರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿತು. ಪಕ್ಷದ ಈ ಬದಲಾವಣೆಯನ್ನು ಒಪ್ಪದ ಕೌಶಿಕ್ ರಾಯ್, ತಾವೇ ಅಂತಿಮ ಅಭ್ಯರ್ಥಿ ಎಂದು ಪಟ್ಟು ಹಿಡಿದು ನಾಮಪತ್ರ ಸಲ್ಲಿಸಿದರು. ಇತ್ತ ದಲಿಮ್ ರಾಯ್ ಕೂಡ ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿ, ಬಿ-ಫಾರ್ಮ್ ತಮಗೇ ಸಿಕ್ಕಿದೆ ಎಂದು ಪ್ರತಿಪಾದಿಸಿದರು.