ಪಂಚಭೂತಗಳಲ್ಲಿ ಲೀನವಾದ ತ್ವಿಶಾ: ಸಾವನ್ನಪಿ 12 ದಿನಗಳ ಬಳಿಕ ನಡೆದ ಅಂತ್ಯಸಂಸ್ಕಾರ; ಮುಗಿಲು ಮುಟ್ಟಿದ ಮನೆಯವರ ಆಕ್ರಂದನ! Twisha Sharma Funeral
ಪಂಚಭೂತಗಳಲ್ಲಿ ಲೀನವಾದ ನಟಿ ತ್ವಿಶಾ ಶರ್ಮಾ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾವನ್ನಪ್ಪಿ 12 ದಿನಗಳ ನಂತರ ನೆರವೇರಿದ ಅಂತ್ಯಸಂಸ್ಕಾರ
ಪಂಚಭೂತಗಳಲ್ಲಿ ಲೀನವಾದ ನಟಿ ತ್ವಿಶಾ ಶರ್ಮಾ
ಮುಗಿಲು ಮುಟ್ಟಿದ ಮನೆಯವರ ಆಕ್ರಂದನ
ಭೋಪಾಲ್: ಕೆಲ ದಿನಗಳಿಂದ ದೇಶದಾದ್ಯಂತ ಚರ್ಚೆಗೆ ಕಾರಣವಾಗಿರುವ ನಟಿ ತ್ವಿಶಾ ಶರ್ಮಾ ಅವರ ಅಂತ್ಯಕ್ರಿಯೆ (Twisha Sharma Funeral) 12 ದಿನಗಳ ನಂತರ ಭೋಪಲ್ನಲ್ಲಿ ಇಂದು (ಮೇ.24) ನಡೆದಿದೆ. ಮಧ್ಯಪ್ರದೇಶ್ ಹೈಕೋರ್ಟ್ ಹೇಳಿದಂತೆ ದೆಹಲಿಯ ಏಮ್ಸ್ ವೈದ್ಯರಿಂದ ಎರಡನೇ ಮರಣೋತ್ತರ ಪರೀಕ್ಷೆ ನಡೆದ ನಂತರ ಶವವನ್ನು ತ್ವಿಶಾ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಅಂತ್ಯ ಸಂಸ್ಕಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತ್ವಿಶಾ ತಂದೆ ನವನಿಧಿ ಶರ್ಮಾ, ನನ್ನ ಮಗಳು ಸತ್ತು 12 ದಿನಗಳ ನಂತರ ಅಂತ್ಯ ಸಂಸ್ಕಾರ ನಡೆಯುವಂತಾಯಿತು. ಆದರೂ ನನ್ನ ಮಗಳು ಪಂಚಭೂತಗಳಲ್ಲಿ ಲೀನವಾದಳು ಎಂದು ಹೇಳಿ ಭಾವುಕರಾಗಿದ್ದಾರೆ.
ತಲೆಮರೆಸಿಕೊಂಡಿದ್ದ ಗಂಡ ಪೊಲೀಸ್ ಕಸ್ಟಡಿಗೆ
ಈ ಸಾವಿನ ಪ್ರಕರಣದ ಆರೋಪಿಯಾಗಿರುವ ತ್ವಿಶಾ ಶರ್ಮಾ ಪತಿ ಸಮರ್ಥ ಸಿಂಗ್ ಸಾವಿನ ದಿನದಿಂದ ಕಣ್ಮರೆಯಾಗಿದ್ದು, ನಿನ್ನೆ (ಮೇ.23) ಭೋಪಾಲ್ ನ್ಯಾಯಾಲದಲ್ಲಿ ಪ್ರತ್ಯಕ್ಷನಾಗಿದ್ದ. ಇತನನ್ನು ಏಳು ದಿನಗಳ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಕಳಿಸುವಂತೆ ನ್ಯಾಯಾಲಯ ಆದೇಶ ಮಾಡಿದೆ.
ಏನಿದು ತ್ವಿಶಾ ಶರ್ಮಾ ಪ್ರಕರಣ?
ಕಳೆದ ಮೇ 12 ರಂದು ಭೋಪಾಲ್ನ ಕತಾರಾ ಹಿಲ್ಸ್ನಲ್ಲಿರುವ ತನ್ನ ಪತಿಯ ಮನೆಯಲ್ಲಿ ತ್ವಿಶಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ಮರುದಿನವೇ ಅಂದರೆ ಮೇ 13 ರಂದು ಮೊದಲ ಮರಣೋತ್ತರ ಪರೀಕ್ಷೆ ನಡೆದಿತ್ತು. ಆದರೆ, ಈ ಮೊದಲ ವರದಿಯಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಹೊರಬಂದಿವೆ.
ವರದಿಯ ಪ್ರಕಾರ, ತ್ವಿಶಾ ಕುತ್ತಿಗೆಯ ಮೇಲೆ ಎರಡು ಗಂಭೀರವಾದ ಗುರುತುಗಳಿದ್ದವು. ಅಷ್ಟೇ ಅಲ್ಲದೆ ಅವರ ಕೈಗಳು, ಮುಂಗೈ ಮತ್ತು ಬೆರಳುಗಳ ಮೇಲೆಯೂ ಗಾಯದ ಕಲೆಗಳು ಪತ್ತೆಯಾಗಿದ್ದವು. ಯಾರೋ ಅವರ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಕುಟುಂಬಸ್ಥರು ನಂಬಿದ್ದಾರೆ.
ಅಷ್ಟೇ ಅಲ್ಲದೆ ತ್ವಿಶಾಳ ಪತಿ ಹಾಗೂ ಅತ್ತೆ (ಗಂಡನ ತಾಯಿ) ತನ್ನ ಮಗಳಿಗೆ ವರದಕ್ಷಿಣೆ ಸಂಬಂಧ ನಿರಂತರ ಕಿರುಕುಳ ನೀಡುತ್ತಿದ್ದರು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯವಳಲ್ಲ. ನಮ್ಮ ಮಗಳ ಕೊಲೆ ನಡೆದ ಬಗ್ಗೆ ಅನುಮಾನವಿದೆ ಎನ್ನುವುದು ತ್ವಿಶಾಳ ಪಾಲಕರ ವಾದವಾಗಿದೆ,(ಏಜನ್ಸೀಸ್).