ಅವಳಿ ಸಹೋದರರನ್ನೇ ವರಿಸಿದ ಅವಳಿ ಅಕ್ಕ-ತಂಗಿ! ಈ ಅಪರೂಪದ ಕಲ್ಯಾಣ ಮಾಡಿಸಿದ್ದು ಅವಳಿ ಪುರೋಹಿತರೇ

ಅವಳಿ ಸಹೋರರನ್ನೇ ವರಿಸಿದ ಅವಳಿ ಸಹೋದರಿಯರು
ಅವಳಿ ಸಹೋರರನ್ನೇ ವರಿಸಿದ ಅವಳಿ ಸಹೋದರಿಯರು
Published on

ಪ್ರಮುಖ ಮುಖ್ಯಾಂಶಗಳು

  • ಅವಳಿ ಸಹೋದರರನ್ನೇ ವರಿಸಿದ ಅವಳಿ ಸಹೋದರಿಯರು
  • ಈ ಅಪರೂಪದ ಕಲ್ಯಾಣಕ್ಕೆ ಅವಳಿ ಪುರೋಹಿತರೇ ಸಾಕ್ಷಿ
  • ಬಾಲ್ಯದ ಕನಸನ್ನು ಕಡೆಗೂ ನನಸಾಗಿಸಿಕೊಂಡ ಕೇರಳ ಜೋಡಿಗಳು​
ಕೊಟ್ಟಾಯಂ: ಬಾಲ್ಯದ ಆಸೆಯಂತೆ ಅವಳಿ ಸಹೋದರರನ್ನೇ ವರಿಸಿದ ಅವಳಿ ಅಕ್ಕ-ತಂಗಿಯರ ಅಪರೂಪದ ಕಲ್ಯಾಣ ಕೇರಳದ ಚಂಗನಶ್ಶೇರಿಯಲ್ಲಿ ವರದಿಯಾಗಿದೆ. ಮತ್ತೊಂದು ವಿಶೇಷ ಎಂದರೆ, ಈ ಮದುವೆಯನ್ನು ನೆರವೇರಿಸಿದ್ದು ಕೂಡ ಟ್ವಿನ್​ ಪುರೋಹಿತರೇ ಎಂಬುದು ಸದ್ಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಅಪರೂಪದ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅವಳಿ ಸಹೋದರರು ಅವಳಿ ಸಹೋದರಿಯರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ನೆರವೇರಿಸಿದವರೂ ಅವಳಿ ಪುರೋಹಿತರೇ ಎಂಬ ಸಂಗತಿಯನ್ನು ತಿಳಿದು ಸ್ವತಃ ವಿವಾಹ ಸಂಭ್ರಮಕ್ಕೆ ಆಗಮಿಸಿದ್ದ ಅತಿಥಿಗಳೇ ಒಂದು ನಿಮಿಷ ಅಚ್ಚರಿ ಪಟ್ಟಿದ್ದಾರೆ. ಇಷ್ಟೇ ಅಲ್ಲ, ಪುರೋಹಿತರಿಗೆ ಸಹಾಯ ಮಾಡಿದ ಬಾಲಕರೂ ಸಹ ಅವಳಿಯೇ ಆಗಿದ್ದರು.
ಚಂಗನಶ್ಶೇರಿ ಮೆಟ್ರೋಪಾಲಿಟನ್ ಚರ್ಚ್​ನಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಅಖಿಲ್ ಕೆ. ಥಾಮಸ್ ಎಂಬುವರು ಮ್ಯಾಗಿ ಮೇರಿ ಥಾಮಸ್ ಅವರನ್ನು ವರಿಸಿದರೆ, ಅವರ ಅವಳಿ ಸಹೋದರ ನಿಖಿಲ್ ಕೆ. ಥಾಮಸ್ ಅವರು ಮಾರಿಯಾ ಮೇರಿಯ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಮದುವೆಗೆ ಎರಡೂ ಕುಟುಂಬಗಳು ಬಹಳ ಖುಷಿಯಿಂದ ಸಮ್ಮತಿ ನೀಡಿ, ಸಮಾರಂಭವನ್ನು ಜೋರಾಗಿ ನಡೆಸಿಕೊಟ್ಟಿವೆ.

ನನಸಾದ ಬಾಲ್ಯದ ಕನಸು

ಮ್ಯಾಗಿ ಮತ್ತು ಮಾರಿಯಾ ಬಾಲ್ಯದಿಂದಲೇ ಇಬ್ಬರೂ ಅವಳಿ ಸಹೋದರರನ್ನೇ ಮದುವೆಯಾಗುವ ಕನಸನ್ನು ಹೊಂದಿದ್ದರಂತೆ. ಅದಕ್ಕೆ ತಕ್ಕಂತೆಯೇ ಯುವತಿಯರ ಪೋಷಕರು ಸಹ ಮಕ್ಕಳ ಆಸೆಯನ್ನು ಈಡೇರಿಸಲು ಕೊಥನಲ್ಲೂರಿನ ಚರ್ಚ್ ಮೂಲಕ ಅವಳಿ ಪುರೋಹಿತರನ್ನೇ ಸಂಪರ್ಕಿಸಿದ್ದರು. ದೇವರ ಕೃಪೆಯಿಂದ ನಾವುಗಳು ಅಂದುಕೊಂಡಂತೆ ಮದುವೆ ಸಂಭ್ರಮದಿಂದ ನೆರವೇರಿತು ಎಂದು ನವ ಜೋಡಿಗಳು ಹೇಳಿಕೊಂಡಿದ್ದಾರೆ.

ವೃತ್ತಿ ಜೀವನವೂ ಭಿನ್ನ

ಅಖಿಲ್ ಮತ್ತು ನಿಖಿಲ್ ಇಬ್ಬರೂ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಮ್ಯಾಗಿ ಮತ್ತು ಮಾರಿಯಾ ಐಟಿ ಕ್ಷೇತ್ರದಲ್ಲಿ ಉದ್ಯೋಗ ಹುಡುಕಿಕೊಂಡಿದ್ದಾರೆ. ಅವಳಿಗಳು ಬೇರೆ ಬೇರೆ ವೃತ್ತಿಯಲ್ಲಿದ್ದರೂ, ಒಂದೇ ದಿನ, ಒಂದೇ ವೇದಿಕೆಯಲ್ಲಿ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿರುವುದು ಹಲವರ ಅಚ್ಚರಿಗೆ ಹಾಗೂ ಸಂತಸಕ್ಕೆ ಕಾರಣವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net