TVK ಯಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: ಚುನಾವಣಾ ಸಮರಕ್ಕೆ ಸಿದ್ಧನಾದ ವಿಜಯ್; ಪೆರಂಬೂರ್; ತಿರುಚಿಯಿಂದ ಧಳಪತಿ ಸ್ಪರ್ಧೆ! Thalapathy Vijay
ಪೆರಂಬೂರ್ ಮತ್ತು ತಿರುಚಿ(ಪೂರ್ವ) ದಿಂದ ಧಳಪತಿ ವಿಜಯ್ ಸ್ಪರ್ಧೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡಿನ ವಿಧಾನಸಭಾ ಚುನಾವಣೆ
TVK ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೆರಂಬೂರ್ ಮತ್ತು ತಿರುಚಿ(ಪೂರ್ವ) ದಿಂದ ಧಳಪತಿ ವಿಜಯ್ ಸ್ಪರ್ಧೆ
ಮೇ. 4 ರಂದು ಹೊರಬೀಳಲಿರುವ ಫಲಿತಾಂಶ
ಚೆನ್ನೈ: ಇನ್ನೇನು ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲ್ಲಿದ್ದು, ಭಾನುವಾರ (ಮಾರ್ಚ್ 29) ರಂದು ನಟ ಧಳಪತಿ ವಿಜಯ್ (Thalapathy Vijay) ನೇತೃತ್ವದ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಗೊಳಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಪೆರಂಬೂರ್ ಹಾಗೂ ತಿರಚಿ(ಪೂರ್ವ) ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಒಟ್ಟು 234 ಕ್ಷೇತ್ರಗಳಲ್ಲಿ ನಡೆಯಲಿರುವ ಈ ಚುನಾವಣೆಯ ಮತದಾನವು ಏಪ್ರಿಲ್ 23 ರಂದು ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರ ಬೀಳಲಿದೆ.
ಇವರು ಕೇವಲ ಅಭ್ಯರ್ಥಿಗಳಲ್ಲ; ಜನರ ರಕ್ಷಕರು
ತಮಿಳಿಗ ವೆಟ್ರಿ ಕಳಗಂ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಬಹಿರಂಗ ಪಡಿಸುತ್ತಾ ಮಾತನಾಡಿದ ವಿಜಯ್, ಇವರು ಕೇವಲ ಒಂದು ಪಕ್ಷದ ಅಭ್ಯರ್ಥಿಗಳಲ್ಲ ಬದಲಿಗೆ ಇವರು ಜನರ ರಕ್ಷಕರು ಮತ್ತು ಸೇವಕರಾಗಿದ್ದಾರೆ ಎಂದು ಹೇಳಿದರು.
ಇವರ್ಯಾರು ಅಪರಾಧ ಹಿನ್ನಲೆಯಿಂದ ಬಂದವರಲ್ಲ, ಎಲ್ಲರೂ ಸಾಮಾನ್ಯ ಜನರ ಮಧ್ಯದಲ್ಲಿ ಬೆಳೆದವರಾಗಿದ್ದು, ಇವರಲ್ಲಿ ಒಬ್ಬರ ಮೇಲೆ ಸಹ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಹಾಗೆಯೇ ಇವರು ಆಡಳಿತರೂಢ ಡಿಎಂಕೆ ಗೂಂಡಾಗಳ ರೀತಿ ಅಕ್ರಮವಾಗಿ ಹಣವನ್ನು ಗಳಿಸಿ, ಜನರನ್ನು ಥಿಳಿಸುವ ಕೆಲಸ ಮಾಡುವವರಲ್ಲ ಎಂದು ವಿಜಯ್ ಭರವಸೆ ನೀಡಿದ್ದಾರೆ.
ಟಿವಿಕೆ ಪ್ರನಾಳಿಕೆಯಲ್ಲಿ ಏನಿದೆ?
ಮುಂಬರುವ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಟಿವಿಕೆ ಪಕ್ಷ ಬಿಡುಗಡೆ ಮಾಡಿರುವ ಪಕ್ಷದ ಪ್ರನಾಳಿಕೆಯಲ್ಲಿ ಈ ಕೆಳಗಿನ ಅಂಶಗಳನ್ನು ಘೋಷಿಸಲಾಗಿದೆ.
ಜಾತ್ಯತೀತ ಸಾಮಾಜಿಕ ನ್ಯಾಯ
ಟಿವಿಕೆ ಪಕ್ಷದ ಮುಖ್ಯ ಸಿದ್ಧಾಂತವೇ ಸಾಮಾಜಿಕ ನ್ಯಾಯ. ಸಮಾಜದ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡುವುದು ಇವರ ಮೊದಲ ಆದ್ಯತೆಯಾಗಿದೆ.
ಅಂಚಿನಲ್ಲಿರುವ ವರ್ಗಗಳ ಏಳಿಗೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸುವುದು.
ಭ್ರಷ್ಟಾಚಾರ ಮುಕ್ತ ಆಡಳಿತ
ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದುಹಾಕುವುದು ವಿಜಯ್ ಅವರ ಪ್ರಮುಖ ಗುರಿಗಳಲ್ಲಿ ಒಂದಾಗಿದೆ.
ಶಿಕ್ಷಣ ಮತ್ತು ಆರೋಗ್ಯ
ರಾಜ್ಯದ ಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ಉಚಿತ/ಕಡಿಮೆ ವೆಚ್ಚದ ಆರೋಗ್ಯ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಬಗ್ಗೆ ಒತ್ತು ನೀಡಲಾಗುವುದು.
ಈ ವರ್ಷ ತಮಿಳು ನಾಡಿನಲ್ಲಿ ಏಪ್ರಿಲ್ 23 ರಂದು 234 ಕ್ಷೇತ್ರಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದರಲ್ಲಿ 118 ಕ್ಷೇತ್ರಗಳಲ್ಲಿ ಗೆದ್ದ ಪಕ್ಷವು ಮುಂದಿನ ಐದು ವರ್ಷಗಳಿಗೆ ಆಡಳಿತ ನಡೆಸಲಿದೆ. ಮೇ 4 ರಂದು ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.
ಈ ಭಾರಿಯ ಚುನಾವಣೆಯಲ್ಲಿ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ), ಬಿಜೆಪಿ, ಕಾಂಗ್ರೆಸ್, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಹಾಗೂ ಇತರೆ ಎಡ ಪಕ್ಷಗಳು ಈ ಭಾರಿ ಕಣದಲ್ಲಿವೆ.
ಈ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ, ಎಐಎಡಿಎಂಕೆ ಹಾಗೂ ಬಿಜೆಪಿ ಸಹ ನಡುವೆ ಮೈತ್ರಿ ನಡೆದಿದೆ. ಹೀಗಾಗಿ ವಿಜಯ್ ನೇತೃತ್ವದ ಟಿವಿಕೆ ಒಬ್ಬಂಟಿಯಾಗಿ ಈ ಎಲ್ಲರನ್ನು ಎದುರಿಸುವ ಸಂದರ್ಭ ಎದುರಾಗಿದೆ,(ಏಜನ್ಸೀಸ್).