ನೇಪಾಳದ ಧಾದಿಂಗ್ ಜಿಲ್ಲೆಯ ಮೇಲೆ ಸುಮಾರು 10 ನಿಮಿಷಗಳ ಕಾಲ ವಿಮಾನವು ಹಾರಾಟ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿತು. ಕಾಠ್ಮಂಡುವಿಗೆ ಮರಳುವ ಅವಕಾಶವಿದ್ದರೂ, ಲಾಂಗ್-ಹಾಲ್ ಪ್ರಯಾಣಕ್ಕೆ ವಿಮಾನ ಸುರಕ್ಷಿತವಲ್ಲ ಎಂದು ಅರಿತ ಪೈಲಟ್‌ಗಳು ಹತ್ತಿರದ ಕೋಲ್ಕತ್ತಾ ನಿಲ್ದಾಣಕ್ಕೆ ವಿಮಾನವನ್ನು ತಿರುಗಿಸಿ, ಮಧ್ಯಾಹ್ನ 3:03ಕ್ಕೆ ಸುರಕ್ಷಿತವಾಗಿ ಕೆಳಗಿಳಿಸಿದರು.ಟರ್ಕಿಶ್ ವಿಮಾನ ಬೆಂಕಿಗೆ ಆಹುತಿಯಾಗುವ ಹಂತದಿಂದ ಪಾರಾಗಿರುವುದು ವಿಮಾನಯಾನ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸದ್ಯ ಈ ವಿಮಾನವನ್ನು ಕೋಲ್ಕತ್ತಾದಲ್ಲಿ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದೆ,(ಏಜೆನ್ಸೀಸ್).