ಟ್ರಂಪ್ ಅವರ ಸುಂಕ (ಟ್ಯಾರಿಫ್) ನೀತಿಗೂ ಹಲವು ದೇಶಗಳಲ್ಲಿ ವಿರೋಧ ವ್ಯಕ್ತವಾಗಿದೆ. ಭಾರತದಲ್ಲಿ ಕೇವಲ 18 ಶೇಕಡ ಜನರು ಮಾತ್ರ ಟ್ರಂಪ್ ಅವರ ವ್ಯಾಪಾರ ನೀತಿಯನ್ನು ಬೆಂಬಲಿಸಿದ್ದಾರೆ. ಯುಕೆಯಲ್ಲಿ ಇದು 27 ಶೇಕಡ, ಕೆನಡಾದಲ್ಲಿ 17 ಶೇಕಡ, ಜಪಾನ್‌ನಲ್ಲಿ 15 ಶೇಕಡ, ದಕ್ಷಿಣ ಕೊರಿಯಾದಲ್ಲಿ 14 ಶೇಕಡ, ಮೆಕ್ಸಿಕೊದಲ್ಲಿ 11 ಶೇಕಡ ಹಾಗೂ ಜರ್ಮನಿಯಲ್ಲಿ ಕೇವಲ 8 ಶೇಕಡ ಜನರು ಮಾತ್ರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ, ಇಸ್ರೇಲ್‌ನಲ್ಲಿ ಅಮೆರಿಕದ ಬಗ್ಗೆ 81 ಶೇಕಡದಷ್ಟು ಅನುಕೂಲಕರ ಅಭಿಪ್ರಾಯ ದಾಖಲಾಗಿದೆ. ಕೆಲವು ಆಫ್ರಿಕಾ ರಾಷ್ಟ್ರಗಳಲ್ಲೂ ಅಮೆರಿಕದ ಇಮೇಜ್ ಉತ್ತಮವಾಗಿದೆ ಎಂದು ವರದಿ ತಿಳಿಸಿದೆ.