ಭಾರತಕ್ಕೆ ಟ್ರಂಪ್ ಮತ್ತಷ್ಟು ಸುಂಕದ ಶಾಕ್: ರಷ್ಯಾ ತೈಲ ಖರೀದಿಸಿದ್ರೆ, ರಫ್ತು ವ್ಯವಹಾರಕ್ಕೆ ಕಾದಿದೆ ಭಾರಿ ಗಂಡಾಂತರ | Trump tariff shock

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ನ್ಯೂಯಾರ್ಕ್​: ಜಾಗತಿಕ ವ್ಯಾಪಾರ ಉದ್ವಿಗ್ನತೆ ಹೆಚ್ಚಾಗಿದ್ದು, ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸಿರುವ ದೇಶಗಳಾದ ಭಾರತ, ಚೀನಾ ಮತ್ತು ಬ್ರೆಜಿಲ್ ಅನ್ನು ಗುರಿಯಾಗಿಸಿಕೊಂಡು ಶೇ.500 ರಷ್ಟು ಸುಂಕಗಳನ್ನು ವಿಧಿಸಬಹುದಾದ ದ್ವಿಪಕ್ಷೀಯ ಮಸೂದೆಗೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump tariff shock) ಹಸ್ತು ಎಂದಿದ್ದಾರೆ.
ಈ ಕ್ರಮವು ಅಮೆರಿಕದ ವಿದೇಶಾಂಗ ನೀತಿಯಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ. ಅಲ್ಲದೆ, ರಷ್ಯಾ-ಯುಕ್ರೇನ್ ಸಂಘರ್ಷದಲ್ಲಿ ತಟಸ್ಥ ರಾಷ್ಟ್ರಗಳು ಒಂದು ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯಿಸಲು ಈ ತಂತ್ರವನ್ನು ಬಳಲಾಗಿದೆ.

ರಷ್ಯಾ ಮಂಜೂರಾತಿ ಕಾಯ್ದೆ 2025

ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ನೇತೃತ್ವದ ಈ ಶಾಸನವು ಕ್ರೆಮ್ಲಿನ್‌ನ ಯುದ್ಧ ಯಂತ್ರವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದೆ.
ರಷ್ಯಾದ ಪೆಟ್ರೋಲಿಯಂ ಉತ್ಪನ್ನಗಳು ಅಥವಾ ಯುರೇನಿಯಂ ಅನ್ನು ಉದ್ದೇಶಪೂರ್ವಕವಾಗಿ ಖರೀದಿಸುವ ಯಾವುದೇ ದೇಶದಿಂದ ಎಲ್ಲಾ ಸರಕು ಮತ್ತು ಸೇವೆಗಳ ಮೇಲೆ ಕನಿಷ್ಠ ಶೇ.500 ಸುಂಕವನ್ನು ವಿಧಿಸುವ ಅಧಿಕಾರವನ್ನು ಈ ಮಸೂದೆಯು ಅಮೆರಿಕ ಅಧ್ಯಕ್ಷರಿಗೆ ನೀಡುತ್ತದೆ. ಅಲ್ಲದೆ, ರಷ್ಯಾ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಅಧ್ಯಕ್ಷರು ನಿರ್ಧರಿಸಿದರೆ ಸುಂಕಗಳನ್ನು ವಿಧಿಸಲು ಮುಂದಾಗುತ್ತದೆ ಎಂದು ತಿಳಿದು ಬಂದಿದೆ.
ಈ ಮಾಸೂದೆಯು ಟ್ರಂಪ್​ 180 ದಿನಗಳ ರಾಷ್ಟ್ರೀಯ ಭದ್ರತೆ ಮನ್ನಾವನ್ನು ಉಳಿಸಿಕೊಂಡಿದ್ದಾರೆ. ಇದು ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಲ್ಲಿ ಬೆದರಿಕೆಯನ್ನು ಒಡ್ಡಲು ಅವಕಾಶ ನೀಡುತ್ತದೆ.

ಭಾರತ ಮೇಲೆ ಬೀರುವ ಪರಿಣಾಮವೇನು..?

ಯುಕ್ರೇನ್​ ಸಂಘರ್ಷ ಆರಂಭವಾದಾಗಿನಿಂದ, ಭಾರತವು ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸುವ ವಿಶ್ವದ ಅತಿದೊಡ್ಡ ಖರೀದಿದಾರರಲ್ಲಿ ಒಂದಾಗಿ ಹೊರಹೊಮ್ಮಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಲವಾದ ವೈಯಕ್ತಿಕ ಸಂಬಂಧವನ್ನು ಹೊಂದಿದ್ದರೂ, ಅಧ್ಯಕ್ಷ ಟ್ರಂಪ್ ಸೌಹಾರ್ದಯುತ ಸಂಬಂಧಗಳು ಭಾರತವನ್ನು ತಮ್ಮ ವ್ಯಾಪಾರ ತಂತ್ರದಿಂದ ಹೊರಗಿಡುವುದಿಲ್ಲ ಎಂದು ಟ್ರಂಪ್​ ಸ್ಪಷ್ಟಪಡಿಸಿದ್ದಾರೆ.

ರಾಜತಾಂತ್ರಿಕ ಹಗ್ಗ ಜಗ್ಗಾಟ

ಈ ಬಗ್ಗೆ ಮಾತನಾಡಿರುವ ಸೆನೆಟರ್ ಗ್ರಹಾಂ, ಇತ್ತೀಚೆಗೆ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಜೂನ್ 2024 ರಿಂದ ರಷ್ಯಾದ ತೈಲ ಆಮದುಗಳಲ್ಲಿ ಶೇ.40 ಕುಸಿತ ಆಗಿದೆ. ಆದರೆ ಯುಎಸ್ ಸಂಪೂರ್ಣ ಸ್ಥಗಿತಗೊಳಿಸುವಂತೆ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ.
ಭಾರತವು ತನ್ನ ಇಂಧನ ನಿರ್ಧಾರಗಳು ರಾಷ್ಟ್ರೀಯ ಹಿತಾಸಕ್ತಿ ಮತ್ತು ಕೈಗೆಟುಕುವಿಕೆಯನ್ನು ಆಧರಿಸಿವೆ ಎಂದು ಹೇಳಿಕೊಳ್ಳುತ್ತದೆ. ಅದರೆ, ಇತ್ತೀಚೆಗೆ ಅಮೆರಿಕವು ವೆನೆಜುವೆಲಾದಲ್ಲಿ ಮಿಲಿಟರಿ ಕ್ರಮ ಕೈಗೊಂಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net