ಟ್ರಂಪ್ ಶಾಂತಿ ಸಂಧಾನಕ್ಕೆ ಜಯ: ಇಂದಿನಿಂದ ರಷ್ಯಾ-ಉಕ್ರೇನ್ ನಡುವೆ 3 ದಿನಗಳ ಕಾಲ ಯುದ್ಧ ವಿರಾಮ! Donald Trump

Donald Trump (ಚಿತ್ರ X)
Donald Trump (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ನಾಲ್ಕು ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧಕ್ಕೆ ಇದೀಗ ಮಹತ್ವದ ತಿರುವು
  • ಮೇ 9 ರಿಂದ ಮೇ 11 ರವರೆಗೆ ತಾತ್ಕಾಲಿಕ ಮೂರು ದಿನಗಳ ಕದನ ವಿರಾಮ ಘೋಷಿಸಿದ ಟ್ರಂಪ್​
  • ಈ ಒಪ್ಪಂದವು ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕಡಿಮೆ ಮಾಡುವ ಮಹತ್ವದ ಹೆಜ್ಜೆಯಾಗಿದೆ
  • ಈ ಕದನ ವಿರಾಮವು ಮೂರು ದಿನಗಳ ಅವಧಿಯಲ್ಲಿ ಸಕ್ರಿಯ ಯುದ್ಧ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತದೆ
ವಾಷಿಂಗ್ಟನ್: ಕಳೆದ ನಾಲ್ಕು ವರ್ಷಗಳಿಂದ ಜಗತ್ತನ್ನೇ ಆತಂಕಕ್ಕೆ ತಳ್ಳಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನೇರ ಮಧ್ಯಸ್ಥಿಕೆಯ ಫಲವಾಗಿ, ಎರಡೂ ರಾಷ್ಟ್ರಗಳು ಮೇ 9 ರಿಂದ ಮೇ 11 ರವರೆಗೆ ಅನ್ವಯವಾಗುವಂತೆ ತಾತ್ಕಾಲಿಕ ಮೂರು ದಿನಗಳ ಕದನ ವಿರಾಮಕ್ಕೆ (Ceasefire) ಒಪ್ಪಿಗೆ ಸೂಚಿಸಿವೆ.
ಈ ಬೆಳವಣಿಗೆ ಬಗ್ಗೆ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಈ ಒಪ್ಪಂದವು ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕಡಿಮೆ ಮಾಡುವ ಮಹತ್ವದ ಹೆಜ್ಜೆಯಾಗಿದೆ. ಆದಾಗ್ಯೂ, ಈ ಕದನ ವಿರಾಮವು ಮೂರು ದಿನಗಳ ಅವಧಿಯಲ್ಲಿ ಸಕ್ರಿಯ ಯುದ್ಧ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತದೆ ಎಂದು ವಿವರಿಸಿದ್ದಾರೆ.

ಬೃಹತ್ ಕೈದಿಗಳ ವಿನಿಮಯ ಒಪ್ಪಂದ

ಕದನ ವಿರಾಮದ ಜೊತೆಗೆ, ಎರಡೂ ದೇಶಗಳು ಯುದ್ಧ ಪ್ರಾರಂಭವಾದ ನಂತರದ ಅತಿದೊಡ್ಡ ಕೈದಿಗಳ ವಿನಿಮಯವನ್ನು ನಡೆಸುವ ನಿರೀಕ್ಷೆ ಇದ್ದು, ಒಪ್ಪಂದದ ಭಾಗವಾಗಿ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳು ತಲಾ 1,000 ಯುದ್ಧ ಕೈದಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅಧಿಕೃತವಾಗಿ ಒಪ್ಪಿಕೊಂಡಿವೆ ಎಂದು ಟ್ರಂಪ್​ ತಿಳಿಸಿದ್ದಾರೆ.
ತಾತ್ಕಾಲಿಕ ಕದನ ವಿರಾಮವನ್ನು ವೈಯಕ್ತಿಕವಾಗಿ ವಿನಂತಿಸುತ್ತಿದ್ದೇನೆ. ಜೊತೆಗೆ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
ಈ ಕದನ ವಿರಾಮದ ಘೋಷಣೆಯ ಹಿಂದೆ ಒಂದು ಬಲವಾದ ಐತಿಹಾಸಿಕ ಕಾರಣವಿದೆ ಎಂದು ಡೊನಾಲ್ಡ್ ಟ್ರಂಪ್ ಉಲ್ಲೇಖಿಸಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸೋವಿಯತ್ ಒಕ್ಕೂಟ ಸಾಧಿಸಿದ ವಿಜಯವನ್ನು ಸ್ಮರಿಸುವ 'ರಷ್ಯಾದ ವಿಜಯ ದಿನ'ದ (Victory Day) ಸಮಯದಲ್ಲೇ ಈ ಕದನ ವಿರಾಮ ಬರುವಂತೆ ನೋಡಿಕೊಳ್ಳಲಾಗಿದೆ. ಈ ಐತಿಹಾಸಿಕ ಸಂದರ್ಭವು ಉಭಯ ದೇಶಗಳ ನಡುವೆ ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ಆರಂಭಕ್ಕೆ ಪ್ರೇರಣೆಯಾಗಲಿ ಎಂಬುದು ಅವರ ಆಶಯವಾಗಿದೆ.
ಯುದ್ಧದ ಸಮಯದಲ್ಲಿ ಯುಕ್ರೇನ್‌ನ ಐತಿಹಾಸಿಕ ಕೊಡುಗೆಯನ್ನು ಒಪ್ಪಿಕೊಂಡ ಅವರು ಇದು ಎರಡೂ ದೇಶಗಳಿಗೆ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ರಷ್ಯಾ-ಯುಕ್ರೇನ್ ಸಂಘರ್ಷವನ್ನು ಎರಡನೇ ಮಹಾಯುದ್ಧದ ನಂತರ ಅತ್ಯಂತ ಗಂಭೀರ ಜಾಗತಿಕ ಮುಖಾಮುಖಿ ಎಂದು ಬಣ್ಣಿಸಿದ್ದು ನಡೆಯುತ್ತಿರುವ ಮಾತುಕತೆಗಳು ಸಂಭವನೀಯ ಪರಿಹಾರದತ್ತ ಸ್ಥಿರವಾಗಿ ಸಾಗುತ್ತಿವೆ ಎಂದಿದ್ದಾರೆ.

ಝೆಲೆನ್ಸ್ಕಿಕರೆ!

ಟ್ರಂಪ್ ಅವರ ಘೋಷಣೆಯ ನಂತರ, ದೊಡ್ಡ ಪ್ರಮಾಣದ ಕೈದಿಗಳ ವಿನಿಮಯಕ್ಕೆ ಯುಕ್ರೇನ್ ರಷ್ಯಾದ ಅನುಮೋದನೆಯನ್ನು ಪಡೆದಿದ್ದು, ಕದನ ವಿರಾಮವನ್ನು ಮೂರು ದಿನಗಳಲ್ಲಿ ಸರಿಯಾಗಿ ಜಾರಿಗೆ ತರಬೇಕು ಮತ್ತು ಗೌರವಿಸಬೇಕು ಎಂದು ಝೆಲೆನ್ಸ್ಕಿದೃಢಪಡಿಸಿದರು.
ಆದಾಗ್ಯೂ, 1,000 ಕ್ಕೆ 1,000 ಕೈದಿಗಳ ವಿನಿಮಯವನ್ನು ನಡೆಸಲು ರಷ್ಯಾದ ಒಪ್ಪಂದವನ್ನು ನಾವು ಸ್ವೀಕರಿಸಿದ್ದೇವೆ. ಮೇ 9, 10 ಮತ್ತು 11 ರಂದು ಕದನ ವಿರಾಮ ಆಡಳಿತವನ್ನು ಸ್ಥಾಪಿಸಬೇಕು" ಎಂದು ಹೇಳಿದರು.
ಕಳೆದ ಹಲವಾರು ವರ್ಷಗಳಿಂದ ಭೀಕರ ವಿನಾಶ, ಅಪಾರ ಜೀವಹಾನಿ ಮತ್ತು ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಿದ್ದ ಈ ಸುದೀರ್ಘ ಸಂಘರ್ಷದಲ್ಲಿ, ಪ್ರಸ್ತುತ ಘೋಷಣೆಯಾಗಿರುವ ಕದನ ವಿರಾಮವು 'ಅಪರೂಪದ ರಾಜತಾಂತ್ರಿಕ ಜಯ' ಎಂದೇ ವಿಶ್ಲೇಷಿಸಲಾಗುತ್ತಿದೆ. ಯುದ್ಧದ ಕಪಿಮುಷ್ಠಿಯಲ್ಲಿ ಸಿಲುಕಿದ್ದ ವಿಶ್ವಕ್ಕೆ ಇದು ಸಣ್ಣ ಸಮಾಧಾನ ತಂದಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net