ಅರುಣಾಚಲ ಪ್ರದೇಶದಲ್ಲಿ ಭೀಕರ ಅಪಘಾತ; ಕಂದಕ್ಕೆ ಉರುಳಿದ ಟ್ರಕ್​: 17 ಜನರು ಮೃತಪಟ್ಟಿರುವ ಶಂಕೆ!

Truck falls ditch
Truck falls ditch
Published on
ಅರುಣಾಚಲ ಪ್ರದೇಶ: 21 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ ಭಾರತ-ಚೀನಾ ಗಡಿಯಲ್ಲಿನ ಅಂಜಾವ್ ಜಿಲ್ಲೆಯ ಹಯುಲಿಯಾಂಗ್ ಮತ್ತು ಸಗಲ್​​ಗಾಮ್​ ರಸ್ತೆಯಲ್ಲಿ ಆಳವಾದ ಕಂದಕ್ಕೆ ಉರುಳಿ ಬಿದ್ದಿದ್ದು, 17 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಪ್ರಕರಣ ಡಿಸೆಂಬರ್ 8 ರಂದು ನಡೆದಿದೆ. ಆದರೆ, ಅಪಘಾತದ ಬಗ್ಗೆ ಬದುಕುಳಿದ ವ್ಯಕ್ತಿಯೊಬ್ಬರು ಅಧಿಕಾರಿಗಳಿಗೆ ಇದೀಗ ಮಾಹಿತಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಅಂಜಾವ್ ಉಪ ಆಯುಕ್ತ ಮಿಲ್ಲೊ ಕೊಜಿನ್ ಅವರ ಪ್ರಕಾರ, ಕನಿಷ್ಠ 17 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಅಪಘಾತ ಸೋಮವಾರ ಸಂಭವಿಸಿದೆ. ಆದಾಗ್ಯೂ, ಗಾಯಗೊಂಡ ಬದುಕುಳಿದ ಒಬ್ಬರು ಪ್ರಧಾನ ಕಚೇರಿ ಪಟ್ಟಣವನ್ನು ತಲುಪಿ 10,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಅಂತರರಾಷ್ಟ್ರೀಯ ಗಡಿಯಿಂದ 45 ಕಿ.ಮೀ ದೂರದಲ್ಲಿರುವ ಚಾಗ್ಲಗಮ್ ಗಡಿ ರಸ್ತೆಯಲ್ಲಿ ನಡೆದ ಮಾರಕ ಅಪಘಾತದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇದೀಗ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಸ್ಸಾಂನ ದಿಬ್ರುಗಢದಿಂದ ಎನ್‌ಡಿಆರ್‌ಎಫ್ ತಂಡವನ್ನು ಸಹ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net